ಇದೀಗ ತಾನೇ ಮುಕ್ತಾಯಗೊಂಡ ಸ್ಪರ್ಧೆಯಲ್ಲಿ ಹಾಂಗ್ ಕಾಂಗ್ ನ ಚು ಮುನ್ ಕೈ ವಿರುದ್ಧ ಗೆಲುವು ಸಾಧಿಸಿದ ಕೃಷ್ಣ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇದರೊಂದಿಗೆ ಈ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಐದನೇ ಚಿನ್ನದ ಪದಕ ಲಭಿಸಿದೆ. ಒಟ್ಟು 19 ಪದಕ ಗಳಿಸಿರುವ ಭಾರತ ಪದಕ ಪಟ್ಟಿಯಲ್ಲಿ 24 ನೇ ಸ್ಥಾನಕ್ಕೆ ಏರಿದೆ.