ಕೋಪಾ ಅಮೆರಿಕಾ ಫೈನಲ್ ಸೋಲಿನಿಂದ ಹತಾಶರಾದ ಮೆಸ್ಸಿ

ಮಂಗಳವಾರ, 7 ಜುಲೈ 2015 (18:20 IST)
ಪುಟ್ಬಾಲ್ ಸೂಪರ್‌ಸ್ಟಾರ್ ಲಯನಲ್ ಮೆಸ್ಸಿ ತಮ್ಮ ಅರ್ಜೆಂಟೈನಾ ತಂಡ ಕೋಪಾ ಅಮೆರಿಕಾ ಫೈನಲ್ ಪಂದ್ಯದಲ್ಲಿ ಚಿಲಿಗೆ ಸೋಲಪ್ಪಿದ ಬಳಿಕ ಅದರಿಂದ ಉಂಟಾದ ನೋವನ್ನು ತೋಡಿಕೊಂಡಿದ್ದಾರೆ.  ಸೋಮವಾರ ಅವರ ಫೇಸ್‌ಬುಕ್ ಅಕೌಂಟ್‌ನಲ್ಲಿ ಚಿಲಿ ವಿರುದ್ಧ ಶನಿವಾರ ಪೆನಾಲ್ಟಿ ಶೂಟ್‌ಔಟ್‌ನಲ್ಲಿ 4-1ರಿಂದ ಉಂಟಾದ ಸೋವಿನ ಕುರಿತು ಫೈನಲ್‌ನಲ್ಲಿ ಸೋಲುವುದಕ್ಕಿಂತ ಹೆಚ್ಚು ನೋವಿನ ಸಂಗತಿ ಫುಟ್ಬಾಲ್‌ನಲ್ಲಿ ಇಲ್ಲ ಎಂದಿದ್ದಾರೆ. 
 
ಆದರೆ ನಮಗೆ ಕಠಿಣ ಕ್ಷಣಗಳಲ್ಲೂ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಮರೆಯುವುದಿಲ್ಲ ಎಂದು ಮೆಸ್ಸಿ ಬರೆದಿದ್ದಾರೆ. 28 ವರ್ಷ ವಯಸ್ಸಿನ ಮೆಸ್ಸಿ ಒಂದು ವಿಶ್ವಕಪ್ ಮತ್ತು ಎರಡು ಕೋಪಾ ಅಮೆರಿಕಾ ಫೈನಲ್ಸ್‌ಗಳಲ್ಲಿ ಸೋತಿದ್ದು, ಬಾರ್ಸೆಲೋನಾದಲ್ಲಿ ಯಶಸ್ಸಿನ ನಡೆಯುವೆಯೂ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅರ್ಜೆಂಟೈನಾ ಗೆಲ್ಲಬೇಕಾಗಿದೆ. 
 
ಅರ್ಜೆಂಟೈನಾ ಕಳೆದ ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿಯಿಂದ 1-0ಯಿಂದ ಸೋಲನುಭವಿಸಿದ್ದು, ಕಳೆದ 22 ವರ್ಷಗಳಿಂದ ಯಾವುದೇ ಪ್ರಮುಖ ಪ್ರಶಸ್ತಿ ಗೆಲ್ಲುವಲ್ಲಿ ಅರ್ಜೆಂಟೈನಾ ವಿಫಲವಾಗಿದೆ
ಸೋಲಿನಿಂದ ಹತಾಶರಾದ ಮೆಸ್ಸಿ ಪಂದ್ಯಾವಳಿ ಪುರುಷೋತ್ತಮ ಪ್ರಶಸ್ತಿಯನ್ನು ನಿರಾಕರಿಸಿದ್ದರಿಂದ ಸಾಂಟಿಯಾಗೊನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಮುನ್ನ ಟ್ರೋಫಿಯನ್ನು ಹಿಂತೆಗೆದುಕೊಳ್ಳಲಾಯಿತು. ಮೆಸ್ಸಿ ಮತ್ತು ಇತರೆ ಅರ್ಜೆಂಟೈನಾ ಆಟಗಾರರನ್ನು ಅವರ ಕಳಪೆ ಪ್ರದರ್ಶನಕ್ಕಾಗಿ ದೇಶದ ಮಾಧ್ಯಮ ಟೀಕಿಸಿತ್ತು.  ಮೆಸ್ಸಿಯ ಕುಟುಂಬವನ್ನು ಕೂಡ ಚಿಲಿ ಅಭಿಮಾನಿಗಳು ಪಂದ್ಯದ ಸಂದರ್ಭದಲ್ಲಿ ಅವಮಾನಿಸಿದ್ದರು ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ