ಸುಧಾರಣೆಗಳ ಅನುಷ್ಠಾನಕ್ಕೆ ಭೇಟಿಯಾಗಲು ಬಿಸಿಸಿಐಗೆ ಲೋಧಾ ಸಮಿತಿ ಸೂಚನೆ

ಶುಕ್ರವಾರ, 22 ಜುಲೈ 2016 (18:39 IST)
ಲೋಧಾ ಸಮಿತಿಯು ಬಿಸಿಸಿಐನ ಅಧ್ಯಕ್ಷ ಅನುರಾಗ್ ಠಾಕುರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಖುದ್ದಾಗಿ ಹಾಜರಾಗಿ ಅದರ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಚರ್ಚಿಸುವಂತೆ ಕೇಳಿದೆ. ಬಿಸಿಸಿಐ ಮೂಲಗಳ ಪ್ರಕಾರ, ಸಮಿತಿಯು ದೆಹಲಿಯಲ್ಲಿ ಆಗಸ್ಟ್ 9ರಂದು ಈ ಸಭೆ ನಡೆಸಲಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಎಲ್ಲಾ ಸುಧಾರಣೆಗಳನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಿದೆ.

ಸಮಿತಿಯು ಮಂಡಳಿಗೆ ನೀಲನಕ್ಷೆಯೊಂದನ್ನು ರೂಪಿಸಿ ಈ ಸುಧಾರಣೆಗಳನ್ನು ಹೇಗೆ ಜಾರಿಗೆ ತರುವುದೆಂದು ತಿಳಿಯಲು ನೆರವಾಗುತ್ತದೆ ಎಂದು ಮೂಲವೊಂದು ಹೇಳಿದೆ.
 
 ಸುಪ್ರೀಂಕೋರ್ಟ್ ಬಿಸಿಸಿಐಗೆ ಎಲ್ಲಾ ಸುಧಾರಣೆಗಳ ಅನುಷ್ಠಾನಕ್ಕೆ 6 ತಿಂಗಳ ಕಾಲಾವಧಿ ನೀಡಿರುವ ನಡುವೆ, ಮುಂದಿನ ನಿರ್ದೇಶನಗಳು ಬರುವ ತನಕ ಚುನಾವಣೆ ಪ್ರಕ್ರಿಯೆಗಳನ್ನು ತಡೆಹಿಡಿಯುವಂತೆ ಸಮಿತಿಯು ಬಿಸಿಸಿಐಗೆ ಸೂಚಿಸಿದೆ.
 ಏತನ್ಮಧ್ಯೆ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯನ್ನು ಬಿಸಿಸಿಐ ಕರೆದು ಲೋಧಾ ಸಮಿತಿ ಸುಧಾರಣೆಗಳ ಪರಿಣಾಮಗಳನ್ನು ಕುರಿತು ಚರ್ಚಿಸಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ