ಮಲೇಷ್ಯಾ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ಮಿಂಚಿಂಗ್!

ಶುಕ್ರವಾರ, 20 ಜನವರಿ 2017 (10:28 IST)
ಮಲೇಷ್ಯಾ: ಹಲವು ದಿನಗಳಿಂದ ಗೆಲುವಿಗಾಗಿ ಕಾತರಿಸುತ್ತಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
 

ಸೈನಾ ಅಲ್ಲದೆ ಪುರುಷರ ವಿಭಾಗದಲ್ಲಿ ಅಜಯ್ ಜಯರಾಮ್ ಕೂಡಾ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.  ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ಇಂಡೋನೇಷ್ಯಾದ ಹಾನ್ನ ರಮದಿನಿ ವಿರುದ್ಧ 21-17, 21-12 ರ ಅಂತರದಿಂದ ಗೆಲುವು ದಾಖಲಿಸಿದರು.

ಪುರುಷರ ವಿಭಾಗದಲ್ಲಿ ಜಯರಾಮ್ ಚೀನೀ ಆಟಗಾರ ಹ್ಸುಯೆ ಯೀ 21-12, 15-21, 21-15 ರಿಂದ ಸೋಲಿಸಿದರು. ಭಾರತದ ಇಬ್ಬರೂ ಆಟಗಾರರೂ ತಮ್ಮಆಕ್ರಮಣಕಾರಿ ಆಟದಿಂದ ಗಮನ ಸೆಳೆದರು. ಕಳೆದ ವರ್ಷ ಸೈನಾಗೆ ಅದೃಷ್ಟ ಕೂಡಿಬರಲಿಲ್ಲ. ಈ ವರ್ಷದ ಆರಂಭದಲ್ಲೇ ಗೆಲುವಿನ ಸಿಹಿ ನೀಡುತ್ತಾರಾ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ