ಮಾದಕ ದ್ರವ್ಯ ಸೇವನೆ ಸಾಬೀತು: ಶರಪೋವಾ ಅಮಾನತು

ಮಂಗಳವಾರ, 8 ಮಾರ್ಚ್ 2016 (11:11 IST)
ವಿಶ್ವದ ಮಾಜಿ ನಂಬರ್ ಒನ್ ಟೆನ್ನಿಸ್ ಆಟಗಾರ್ತಿ ರಷ್ಯಾ ಮೂಲದ ಮರಿಯಾ ಶರಪೋವಾ ಮಾದಕ ದ್ರವ್ಯ ಸೇವಿಸಿದ್ದು ಸಾಬೀತಾಗಿದ್ದು ಐಟಿಎಫ್ ಅವರನ್ನು ಅಮಾನತುಗೊಳಿಸಿದೆ.

5 ಬಾರಿಯ ಗ್ರ್ಯಾಂಡ್ ಸ್ಲಾಮ್ ವಿಜೇತೆ, ಜನವರಿ 26 ರಂದು ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತಿದ್ದರು. ಅದೇ ದಿನ ಅವರು  ಡೋಪಿಂಗ್ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ಶರಪೋವಾ ದೇಹದಲ್ಲಿ ನಿಷೇಧಿತ ಮೆಲ್ಡೋನಿಯಂ ಅಂಶ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಟೆನ್ನಿಸ್ ಫೆಡರೇಷನ್‌ ಅವರಿಗೆ ನೋಟಿಸ್ ನೀಡಿತ್ತು. 
 
ಮಾರ್ಚ್ 12 ರಿಂದ ಅನ್ವಯವಾಗುವಂತೆ ಅವರ ಅಮಾನತನ್ನು ಜಾರಿಗೊಳಿಸಲಾಗಿದ್ದು ನಾಲ್ಕು ವರ್ಷಗಳ ಕಾಲ ಅವರು ಟೆನ್ನಿಸ್ ಆಟದಿಂದ ದೂರ ಉಳಿಯಬೇಕಿದೆ. ಸ್ಟಾರ್ ಆಟಗಾರ್ತಿ ಉದ್ದೀಪನ ಸೇವೆ ಸಾಬೀತಾಗಿರುವುದು ಟೆನ್ನಿಸ್ ಲೋಕವನ್ನು ಬೆಚ್ಚಿ ಬೀಳಿಸಿದೆ.
 
ವೈದ್ಯರ ಸಲಹೆಯ ಮೇರೆಗೆ ಕಳೆದ 10 ವರ್ಷಗಳಿಂದ ಮೆಲ್ಡೋರ್ನೇಟ್  ಎಂಬ ಔಷಧಿಯನ್ನು ಸೇವಿಸುತ್ತಿದ್ದೇನೆ. ಅದಕ್ಕೆ ಮೆಲ್ಡೋನಿಯಂ ಎಂಬ ಹೆಸರು ಕೂಡ ಇದೆ ಎಂದು ತಿಳಿದಿರಲಿಲ್ಲ. ಕಾನೂನುಬದ್ಧವಾಗಿಯೇ ಈ ಔಷಧಿ ಸೇವಿಸುತ್ತಿದ್ದೆ. ಈ ಬಾರಿ ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲನಾಗಿದ್ದೇನೆ. ನನ್ನ ನಿರ್ಲಕ್ಷದಿಂದಲೇ ಡೋಂಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ. ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಇದೇ ಮೊದಲ ಬಾರಿಗೆ ಡ್ರಗ್ಸ್ ಸೇವಿಸಿ ಸಿಕ್ಕಿ ಬಿದ್ದ 28 ವರ್ಷದ ಶರಪೋವಾ ತಿಳಿಸಿದ್ದಾರೆ.
 
ಜನೇವರಿ 1ರಂದು ವಿಶ್ವ ಮಾದಕ ವಸ್ತು ಸೇವನೆ ವಿರೋಧಿ ಎಜೆನ್ಸಿ (ವಾಡಾ) ಮಿಲ್ದ್ರೋನೇಟ್‌ ಅನ್ನು ನಿಷೇಧಿತ ವಸ್ತು ಎಂದು ಘೋಷಿಸಿದೆ.

ವೆಬ್ದುನಿಯಾವನ್ನು ಓದಿ