ಉದ್ದೀಪನ ಮದ್ದು : ಟೀಕಾಕಾರರಿಗೆ ಶರಪೋವಾ ತರಾಟೆ

ಶನಿವಾರ, 12 ಮಾರ್ಚ್ 2016 (16:01 IST)
ಟೆನ್ನಿಸ್ ಉದ್ದೀಪನ ಮದ್ದು ಸೇವನೆ ವಿರೋಧಿ ನಿಯಮಗಳಲ್ಲಿ ಬದಲಾವಣೆ ಮಾಡಿದ ಬಗ್ಗೆ ಐದು ಪ್ರತ್ಯೇಕ ಎಚ್ಚರಿಕೆಗಳನ್ನು ತನಗೆ ಕಳಿಸಲಾಗಿದೆ ಎಂಬ ವರದಿ ಕುರಿತು ಖ್ಯಾತ ಟೆನ್ನಿಸ್ ಆಟಗಾರ್ತಿಮಾರಿಯಾ ಶರಪೋವಾ ಕಿಡಿ ಕಾರಿದ್ದಾರೆ. ನಿಯಮಗಳಲ್ಲಿ ಬದಲಾವಣೆ ಮಾಡಿದ್ದರಿಂದ ಅಂತಿಮವಾಗಿ ನಿಷೇಧಿತ ಮದ್ದಿಗೆ ಪಾಸಿಟಿವ್ ಫಲಿತಾಂಶ ಬಂದಿತ್ತು.
 
ಶರಪೋವಾ ತಮ್ಮ ಫೇಸ್ಬುಕ್ ಪುಟದಲ್ಲಿ ತಮ್ಮನ್ನು ಸಮರ್ಥಿಸಿಕೊಂಡಿದ್ದು, ನಾನು ಡಿಸೆಂಬರ್‌ನಲ್ಲಿ ಒಂದು ಸ್ಪಷ್ಟ ನೋಟಿಸ್ ಮಾತ್ರ ಸ್ವೀಕರಿಸಿದ್ದೆ ಎಂದು ಹೇಳಿದರು. ಈ ನೋಟಿಸ್‌ನಲ್ಲಿ ಟೆನ್ನಿಸ್ ಆ್ಯಂಟಿ ಡೋಪಿಂಗ್ ಕಾರ್ಯಕ್ರಮಕ್ಕೆ ಮುಖ್ಯ ಬದಲಾವಣೆಗಳು ಎಂಬ ಶೀರ್ಷಿಕೆಯಿತ್ತು ಎಂದು  ಹೇಳಿದರು. 
 
 ನಾನು ಅದಕ್ಕೆ ಹೆಚ್ಚು ಗಮನ ಹರಿಸಬೇಕಿತ್ತು. ಆದರೆ ಇನ್ನುಳಿದ ಸಂದೇಶಗಳು ನ್ಯೂಸ್‌ಲೆಟರ್‌ಗಳಲ್ಲಿ, ವೆಬ್ ಜಾಲತಾಣಗಳಲ್ಲಿ ಮತ್ತು ಹ್ಯಾಂಡ್ಔಟ್‌ಗಳಲ್ಲಿ ಅಡಗಿದ್ದವು ಎಂದು ರಷ್ಯಾ ಟೆನ್ನಿಸ್ ತಾರೆ ಹೇಳಿದರು. ಶರಪೋವಾ ಅವರ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ  ಮೆಲೋಡಿಯಂ ಪಾಸಿಟಿವ್ ಫಲಿತಾಂಶ ಬಂದಿದ್ದು, ಈ ಉದ್ದೀಪನ ಮದ್ದನ್ನು ನಿಷೇಧಿತ ಪಟ್ಟಿಯಲ್ಲಿ ಜನವರಿ 1ರಂದು ಸೇರಿಸಲಾಗಿತ್ತು. 
 
 ಉದ್ದೀಪನ ಮದ್ದು ಪರೀಕ್ಷಕರ ಯತ್ನ ವಿಫಲಗೊಳಿಸಲು ತಾವು ಗಾಯದ ಸೋಗು ಹಾಕಿಲ್ಲ ಎಂದು 28 ವರ್ಷದ ಶರಪೋವಾ ಸ್ಪಷ್ಟಪಡಿಸಿದರು. ನನಗೆ ವಿಧಿಸಿದ ನಿಷೇಧ ಕುರಿತು ಹೋರಾಟಕ್ಕೆ ನಾನು ಸಂಕಲ್ಪಿಸಿದ್ದೇನೆ. ನನಗೆ ಐದು ಬಾರಿ ಎಚ್ಚರಿಕೆ ನೀಡಲಾಗಿದೆಯೆಂಬುದು ಸುಳ್ಳು ಎಂದು ಹೇಳಿದರು. 
 
ಮೆಲ್ಡೋನಿಯಂ ಮದ್ದನ್ನು ನಿಷೇಧಿಸಲಾಗಿದೆ ಎಂದು ಶರಪೋವಾಗೆ ಐದು ಪ್ರತ್ಯೇಕ ನೋಟಿಸ್ ನೀಡಲಾಗಿತ್ತೆಂದು ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿತ್ತು. ಅಂತಾರಾಷ್ಟ್ರೀಯ ಟೆನ್ನಿಸ್ ಒಕ್ಕೂಟ ಎರಡು ಮತ್ತು ಮಹಿಳಾ ಟೆನ್ನಿಸ್ ಒಕ್ಕೂಟ 2 ನೋಟಿಸ್‌‌ಗಳನ್ನು ಕಳಿಸಿದ್ದವು ಎಂದು ಸುದ್ದಿಪತ್ರಿಕೆ ತಿಳಿಸಿತ್ತು. 
 
 ಕಳೆದ ಡಿ. 18ರಂದು ತನಗೆ ಪ್ಲೇಯರ್ ನ್ಯೂಸ್ ಎಂಬ ಶೀರ್ಷಿಕೆಯ ಈಮೇಲ್ ಬಂದಿದ್ದು, ಅದರಲ್ಲಿ ಶ್ರೇಯಾಂಕಗಳು, ಪಂದ್ಯಾವಳಿ ಸುದ್ದಿಗಳು, ಬುಲೆಟಿನ್‌ಗಳು, ಹುಟ್ಟುಹಬ್ಬದ ಶುಭಾಶಯಗಳ ಜತೆ ಆ್ಯಂಟಿ ಡೋಪಿಂಗ್ ನಿಯಮಗಳಲ್ಲಿ ಬದಲಾವಣೆ ನೋಟಿಸ್ ಮಿಶ್ರಣಮಾಡಲಾಗಿತ್ತು. 
 
 ಈ ಎಚ್ಚರಿಕೆಯನ್ನು ಅರಿಯಲು ಆ್ಯಂಟಿ ಡೋಪಿಂಗ್ ವಿಷಯವಿಲ್ಲದ ಈಮೇಲ್ ತೆರೆದು ವೆಬ್‌ಪುಟದಲ್ಲಿ ಕ್ಲಿಕ್ ಮಾಡಿ, ಪಾಸ್‌ವರ್ಡ್, ಯುಸರ್ ನೇಮ್ ಹಾಕಿ ಕ್ಲಿಕ್ ಮಾಡಿ ಓದಬೇಕಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ