ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದ ಬಾಕ್ಸರ್ ಮೇರಿ ಕೋಮ್

ಶುಕ್ರವಾರ, 30 ಜುಲೈ 2021 (09:00 IST)
ಟೋಕಿಯೋ: ಒಲಿಂಪಿಕ್ಸ್ ಪ್ರಿ ಕ್ವಾರ್ಟರ್ ಫೈನಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸೋಲುಂಡಿರುವ ಭಾರತದ ಬಾಕ್ಸರ್ ಮೇರಿ ಕೋಮ್ ತೀರ್ಪುಗಾರರು ಅನ್ಯಾಯ ಮಾಡಿದ್ದಾರೆ ಎಂದು ದೂರಿದ್ದಾರೆ.


ಈ ಪಂದ್ಯದಲ್ಲಿ ಕೊಲಂಬಿಯಾದ ವೆಲನ್ಷಿಯಾರನ್ನು ವಿಜೇತರೆಂದು ಘೋಷಿಸಲಾಗಿತ್ತು. ಆದರೆ ಮೇರಿ ಇದು ಅನ್ಯಾಯ ಎಂದಿದ್ದಾರೆ. ತಾನು ಅತ್ಯುತ್ತಮವಾಗಿ ಆಡಿದ್ದರೂ ತೀರ್ಪುಗಾರರು ನನ್ನ ವಿರುದ್ಧವಾಗಿ ತೀರ್ಪು ನೀಡಿದ್ದಾರೆ ಎಂದಿದ್ದಾರೆ.

ಮೂರೂ ಸುತ್ತಿನಲ್ಲೂ ಮೇರಿ ಕೋಮ್ ಮೇಲುಗೈ ಹೊಂದಿದ್ದರು. ಆದರೆ ಅಚ್ಚರಿಯೆಂದರೆ ತೀರ್ಪುಗಾರರು ವೆಲನ್ಷಿಯಾ ಪರ ತೀರ್ಪು ನೀಡಿದ್ದರು. ಮೊದಲ ಸುತ್ತಿನಲ್ಲಿ ಮೇರಿ 1-4 ರಿಂದ ಸೋತರು. ಈ ಸುತ್ತಿನಲ್ಲಿ ಒಬ್ಬರನ್ನು ಬಿಟ್ಟು ಉಳಿದ ತೀರ್ಪುಗಾರರು ಮೇರಿ ವಿರುದ್ಧವಾಗಿ ಅಂಕ ನೀಡಿದರು. ಎರಡನೇ ಸುತ್ತಿನಲ್ಲಿ ಮೇರಿ ಗೆದ್ದಿದ್ದರು. ಆಗ 3-2 ಅಂಕವಿತ್ತು. ಮೂರನೇ ಸುತ್ತಿನಲ್ಲೂ ಇದೇ ರೀತಿ ಅಂಕ ಬಂತು. ಒಟ್ಟು ಅಂಕಗಳ ಲೆಕ್ಕಾಚಾರದಲ್ಲಿ ವೆಲನ್ಷಿಯಾ 8, ಮೇರಿ 7 ಅಂಕ ಪಡೆದರು. ಹೀಗಾಗಿ ವೆಲನ್ಷಿಯಾರನ್ನೇ ವಿಜಯಿಯೆಂದು ಘೋಷಣೆ ಮಾಡಲಾಯಿತು.

ಇದು ಅನ್ಯಾಯ ಎಂದು ಮೇರಿ ಕಿಡಿ ಕಾರಿದ್ದಾರೆ. ಪಂದ್ಯದ ಬಳಿಕ ಮಾತನಾಡಿರುವ ಅವರು,  ಮೊದಲ ಸುತ್ತಿನಲ್ಲಿ ಅತ್ಯುತ್ತಮವಾಗಿ ಸ್ಪರ್ಧಿಸಿದರೂ ತೀರ್ಪುಗಾರರು ವಿರುದ್ಧವಾಗಿ ಅಂಕ ನೀಡಿದ್ದರು. ಯಾಕೆ ಹೀಗಾಯಿತು ಗೊತ್ತಿಲ್ಲ ಎಂದು ಮೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ