ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಬ್ಯಾಡ್ಮಿಟಂನ್ ಸಿಂಗಲ್ಸ್ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿರುವ ಭಾರತದ ಪಿ.ವಿ. ಸಿಂಧು ತಮ್ಮ ಯಶಸ್ಸಿನ ಸೀಕ್ರೆಟ್ ಬಯಲು ಮಾಡಿದ್ದಾರೆ.
ಒಬ್ಬ ಆಟಗಾರ ಯಶಸ್ವಿಯಾಗಲು ಮಾನಸಿಕ ಆರೋಗ್ಯವೂ ಮುಖ್ಯ. ನಾನೀಗ ಮಾನಸಿಕವಾಗಿ ಅತ್ಯುತ್ತಮ ಮನಸ್ಥಿತಿಯಲ್ಲಿದ್ದೇನೆ. ಇದಕ್ಕೆ ಕಾರಣ ಯೋಗ, ಧ್ಯಾನ ಎಂದು ಸಿಂಧು ಹೇಳಿದ್ದಾರೆ.
ಎಷ್ಟೆಂದರೆ ಸಿಂಧು ಒಲಿಂಪಿಕ್ಸ್ ಸಮಯದಲ್ಲಿ ಫೋನ್, ಸೋಷಿಯಲ್ ಮೀಡಿಯಾದಿಂದಲೂ ಆದಷ್ಟು ದೂರವಿದ್ದಾರಂತೆ. ಒಲಿಂಪಿಕ್ಸ್ ತಯಾರಿಗೆ ಮುನ್ನ ಸಿಂಧು ಇಂಗ್ಲೆಂಡ್ ಗೆ ತೆರಳಿ ಮೆಂಟಲ್ ಹೆಲ್ತ್ ಸುಧಾರಣೆಗೆ ವಿಶೇಷ ತರಬೇತಿ ಪಡೆದಿದ್ದರು ಎಂಬುದು ಇಲ್ಲಿ ಗಮನಾರ್ಹ.