ಟಾಪ್ 20 ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ ಮೇವೆದರ್, ಫೆಡರರ್, ರೊನಾಲ್ಡೊ, ಮೆಸ್ಸಿ

ಶನಿವಾರ, 19 ಸೆಪ್ಟಂಬರ್ 2015 (16:59 IST)
2015ರಲ್ಲಿ ಅಗ್ರ 20 ಶ್ರೀಮಂತ ಅಥ್ಲೇಟ್‌‌ಗಳು 1995ರ ಅಗ್ರ 20 ಶ್ರೀಮಂತ ಅಥ್ಲೇಟ್‌ಗಳನ್ನು ಶ್ರೀಮಂತಿಕೆಯಲ್ಲಿ ಮೀರಿಸಿದ್ದಾರೆ.  ಟಾಪ್ 25ರಲ್ಲಿ ಏಕಮಾತ್ರ ಕ್ರಿಕೆಟರ್ 23ನೇ ನಂಬರ್‌ನಲ್ಲಿರುವ ಎಂ.ಎಸ್. ಧೋನಿ. 
 
ಲಯನಲ್ ಮೆಸ್ಸಿ, ರೋಜರ್ ಫೆಡರರ್, ಫ್ಲಾಯ್ಡ್ ಮೇವೆದರ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 20 ಅಥ್ಲೀಟ್‌ಗಳ ಪೈಕಿ ಸೇರಿದ್ದಾರೆ. 20 ವರ್ಷಗಳ ಹಿಂದೆ  ಇದೇ ಪಟ್ಟಿಯಲ್ಲಿ ಮೇಲುಗೈ ಸಾಧಿಸಿದ್ದ ಟಾಪ್ 20 ಅಥ್ಲೀಟ್‌ಗಳನ್ನು ಈಗಿನ ಟಾಪ್ 20 ಅಥ್ಲೀಟ್‌ಗಳು ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದ್ದಾರೆ ಎಂದು ಫೋರ್ಬ್ಸ್ ಶುಕ್ರವಾರ ತಿಳಿಸಿದೆ.

 ಅಗ್ರ 40 ಅಥ್ಲೀಟ್‌ಗಳು ಬಹುಮಾನ ಹಣ, ವೇತನ ಮತ್ತು ಒಪ್ಪಂದಗಳ ಮೂಲಕ ಒಟ್ಟು 1.9 ಶತಕೋಟಿ ಡಾಲರ್ ಸಂಪಾದಿಸಿದ್ದಾರೆ. 1995ರಲ್ಲಿ ಟಾಪ್ ಅಥ್ಲೀಟ್‌ಗಳು ಗಳಿಸಿದ 490 ದಶಲಕ್ಷ ಡಾಲರ್‌ಗಳಿಗಿಂತ ಇದು ಹೆಚ್ಚಾಗಿದೆ. ಅಮೆರಿಕದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಜೂ. ಅವರು ಮೇನಲ್ಲಿ ಮ್ಯಾನಿ ಪಾಕ್ವಿಯಾವೊ ಜತೆ ನಡೆಸಿದ ಕದನವು ಬಾಕ್ಸಿಂಗ್ ಇತಿಹಾಸದಲ್ಲಿ ಶ್ರೀಮಂತ ಸ್ಪರ್ಧೆಯಾಗಿದ್ದು, ಪ್ರಸಕ್ತ 300 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.  
 

ವೆಬ್ದುನಿಯಾವನ್ನು ಓದಿ