ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್‌ಗೆ ಚಿನ್ನದ ಪದಕ

ಬುಧವಾರ, 1 ಅಕ್ಟೋಬರ್ 2014 (12:14 IST)
ಏಷ್ಯನ್ ಗೇಮ್ಸ್‌ನಲ್ಲಿ  ಮಹಿಳಾ ಬಾಕ್ಸಿಂಗ್‌ನ 51 ಕೆಜಿ ವಿಭಾಗದಲ್ಲಿ  ಮೇರಿ ಕೋಮ್ ಚಿನ್ನದ ಪದಕವನ್ನು ಗೆಲ್ಲುವ ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ. ಮೇರಿ ಕೋಮ್  ಕಜಕಿಸ್ಥಾನದ ಶಕರ್ ಬೊಕೋವಾ ವಿರುದ್ಧ ಜಯಗಳಿಸಿ ಈ ಪ್ರಶಸ್ತಿಗೆ ಪಾತ್ರರಾದರು. ಈ ಮೂಲಕ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಏಳನೇ ಬಂಗಾರದ ಪದಕವನ್ನು ಗಳಿಸಿದೆ.

ಮೊದಲನೇ ಸುತ್ತಿನಲ್ಲಿ ಶೆಕರ್ ಬೊಕೋವಾ ರಕ್ಷಣಾತ್ಮಕ ತಂತ್ರವನ್ನು ಅನುಸರಿಸಿದರು ಮತ್ತು ಪ್ರಹಾರ ಪ್ರತಿರೋಧಿಸುವ ಕಡೆ ಗಮನಹರಿಸಿದರು. ಎಲ್ಲಾ ಮೂವರು ತೀರ್ಪುಗಾರರು  ಶಕರ್ ಬೊಕೋವಾ ಪರವಾಗಿ ಮೊದಲ ಸುತ್ತಿನಲ್ಲಿ ತೀರ್ಪು ನೀಡಿದರು.

ಎರಡನೇ ಸುತ್ತಿನಲ್ಲಿ ಮೇರಿಕೋಂ ಜಯಶಾಲಿಯಾದರು. ಇದೊಂದು ಕಠಿಣ ಸ್ಪರ್ಧೆಯಾಗಿದ್ದು, ಮೇರಿ ಹೆಚ್ಚು ಪಂಚ್ ಹೊಡೆಯಲು ಸಾಧ್ಯವಾಗದಿದ್ದರೂ ಜಯಗಳಿಸಿದರು.  ಮೂರನೇ ಸುತ್ತಿನಲ್ಲಿ ಮೇರಿ ಕೋಂ ಹೆಚ್ಚು ಆಕ್ರಮಣಕಾರಿಯಾಗಿ ಕಂಡುಬಂದರು. ಕಜಕಿಸ್ತಾನದ ಸ್ಪರ್ಧಿಯ ತಲೆಗೆ ಒಂದು ಪೆಟ್ಟು ಕೊಟ್ಟರು.

ವೆಬ್ದುನಿಯಾವನ್ನು ಓದಿ