ಮುಹಮ್ಮದ್ ಅಲಿ ಗ್ಲೌಸ್ 10 ಲಕ್ಷ ಡಾಲರ್‌ಗೆ ಹರಾಜು

ಸೋಮವಾರ, 23 ಫೆಬ್ರವರಿ 2015 (18:23 IST)
ಮುಹಮ್ಮದ್ ಅಲಿ ಜಗತ್ತಿನ ಅತ್ಯಂತ ಖ್ಯಾತ ಬಾಕ್ಸಿಂಗ್ ಪಟು. ಅಲಿ ಸೋನ್ನಿ ಲಿಸ್ಟನ್ ಅವರನ್ನು ತನ್ನ ಫ್ಯಾಂಟಮ್ ಪಂಚ್ ಮೂಲಕ ಕೆಳಕ್ಕೆ ಬೀಳಿಸಿದ್ದು ವಿವಾದಾತ್ಮಕವಾಗಿತ್ತು. ಅಲಿ ಪಂಚ್ ಮಾಡಿದ ಬಾಕ್ಸಿಂಗ್ ಗ್ಲೌಸ್  ಈಗ ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಹತ್ತು ಲಕ್ಷ ಡಾಲರ್( 650 ಸಾವಿರ ಪೌಂಡ್)ಗೆ ಹತ್ತಿರದಲ್ಲಿ ಮಾರಾಟವಾಗಿದೆ.  

ಕೇಸಿಯಸ್ ಕ್ಲೇ ಎಂಬ ಹೆಸರನ್ನು ಹೊಂದಿದ್ದ ಅಲಿ 1965ರಲ್ಲಿ ಮೈನ್‌ನಲ್ಲಿ ನಡೆದ ಮರುಪಂದ್ಯದಲ್ಲಿ ತನ್ನ ಎದುರಾಳಿಯನ್ನು ಅತ್ಯಂತ ವೇಗವಾದ ಮುಷ್ಠಿಪ್ರಹಾರದಿಂದ ಕೆಳಕ್ಕೆ ಬೀಳಿಸಿದ್ದ. ಈ ಪಂಚ್ ಅಲಿ ಹೊಡೆದಿದ್ದು ಅನೇಕ ಮಂದಿಯ ಗಮನಕ್ಕೆ ಬರಲಿಲ್ಲ. ಅಷ್ಟು ವೇಗವಾಗಿ  ಅಲಿ ಎದುರಾಳಿಗೆ ಪಂಚ್ ಮಾಡಿದ್ದ.

ಈ ಪಂದ್ಯ ಫಿಕ್ಸ್ ಆಗಿರಬಹುದೆಂಬ ಅನುಮಾನವೂ ಕೇಳಿಬಂದಿತ್ತು. ಅಲಿ ತನ್ನ ಪಂಚ್‌ನಿಂದ ಕೆಳಕ್ಕೆ ಬಿದ್ದ ಲಿಸ್ಟನ್‌ ಬಳಿ ನಿಂತು ಮೇಲೆದ್ದು ಫೈಟ್ ಮಾಡುವಂತೆ ಪ್ರಚೋದಿಸುತ್ತಿರುವ ಚಿತ್ರಗಳು ಜನರ ಗಮನಸೆಳೆದಿತ್ತು. ಈ ಗ್ಲೌಸ್‌‌ಗಳನ್ನು ಅಜ್ಞಾತ ಬಿಡ್‌ದಾರ 956,000 ಡಾಲರ್‌ಗೆ ಖರೀದಿ ಮಾಡಿದ್ದಾನೆ. 

ವೆಬ್ದುನಿಯಾವನ್ನು ಓದಿ