ನರಸಿಂಗ್ ಯಾದವ್ ನಿಷೇಧಿತ ಔಷಧಿ ಸೇವನೆ ಪತ್ತೆ: ಒಲಿಂಪಿಕ್ಸ್ ಕನಸು ಭಗ್ನ?

ಭಾನುವಾರ, 24 ಜುಲೈ 2016 (12:57 IST)
ಒಲಿಂಪಿಕ್ಸ್ ಆರಂಭವಾಗುವ 10 ದಿನಗಳ ಮುಂಚೆಯೇ ಭಾರತಕ್ಕೆ ಆಘಾತ ಎದುರಾಗಿದೆ. 74 ಕೆಜಿ ವಿಭಾಗದ ಕುಸ್ತಿಪಟು ನರಸಿಂಗ್ ಯಾದಲ್ ನಾಡಾ ಆಯೋಜಿಸಿದ್ದ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿದ್ದು, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನವಾಗಿದೆ.
 
ನಾಡಾದ ಪ್ರಧಾನ ನಿರ್ದೇಶಕ ನವೀನ್ ಅಗರ್‌ವಾಲ್ ಮಾತನಾಡಿ, ನರಸಿಂಗ್ ಅವರ ಬಿ ಸ್ಯಾಂಪಲ್‌ನಲ್ಲಿ ನಿಷೇಧಿತ ಔಷಧಿ ಸೇವಿಸಿರುವುದು ಪತ್ತೆಯಾಗಿದ್ದು, ನಾಳೆ ಶಿಸ್ತು ಸಮಿತಿಯ ಮುಂದೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
 
ನರಸಿಂಗ್ ಅವರ ಬಿ ಸ್ಯಾಂಪಲ್ ಪರೀಕ್ಷೆಯ ಫಲಿತಾಂಶ ಬಹಿರಂಗಗೊಳಿಸಿದಾಗ ನರಸಿಂಗ್ ಸ್ಥಳದಲ್ಲಿ ಉಪಸ್ಥಿತರಿದ್ದರು. ಅವರು ನಿಷೇಧಿತ ಔಷಧಿ ಸೇವಿಸಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ನರಸಿಂಗ್ ಯಾದವ್ ರಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿಸಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಬಗ್ಗೆ ಹೇಳುವುದು ತುಂಬಾ ಅವಸರವಾಗುತ್ತದೆ. ಸಂಪೂರ್ಣ ಪರೀಕ್ಷೆಯ ನಂತರ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯ. ಕೇವಲ ಉಹಾಪೋಹಗಳ ಮೇಲೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ