ನಿಷ್ಪಕ್ಷಪಾತ ತನಿಖೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ: ನರಸಿಂಗ್ ಯಾದವ್

ಶನಿವಾರ, 20 ಆಗಸ್ಟ್ 2016 (13:35 IST)
ಒಲಿಂಪಿಕ್ಸ್‌ನಿಂದ ನಾಲ್ಕು ವರ್ಷಗಳ ನಿಷೇಧಕ್ಕೆ ಗುರಿಯಾದ ಕುಸ್ತಿಪಟು ನರಸಿಂಗ್ ಯಾದವ್, ನನ್ನ ವಿರುದ್ಧ ಷಡ್ಯಂತ್ರ ನಡೆದಿದ್ದು, ನಿಷ್ಪಕ್ಷಪಾತ ಸಿಬಿಐ ತನಿಖೆ ನಡೆಸುವಂತೆ ಪ್ರಧಾನಿ ಕಚೇರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.
 
ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲಬೇಕು ಎನ್ನುವ ಕನಸು ಹೊತ್ತಿದ್ದ ನರಸಿಂಗ್ ಯಾದವ್‌ಗೆ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ನಾಲ್ಕು ವರ್ಷಗಳ ನಿಷೇಧ ಹೇರಿದ್ದರಿಂದ ಅವರ ಕನಸು ಛಿದ್ರವಾಗಿತ್ತು. ನ್ಯಾಯ ದೊರೆಯುವವರೆಗೆ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. 
 
ನನ್ನ ಮತ್ತು ದೇಶದ ಹೆಸರಿಗೆ ಮಸಿಬಳೆಯಲಾಗಿದೆ. ನಾನು ಗಲ್ಲಿಗೇರಿದರೂ ಚಿಂತೆಯಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಒತ್ತಡ ಹೇರಲು ಸರ್ವೋಚ್ಚ ನ್ಯಾಯಾಲಯಕ್ಕೆ ತೆರಳಲು ಸಿದ್ದ ಎಂದು ಯಾದವ್ ಘೋಷಿಸಿದ್ದಾರೆ.
 
ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ. ಸತ್ಯ ಹೊರಬರಬೇಕು. ಅದಕ್ಕಾಗಿ ಸಿಬಿಐ ತನಿಖೆ ನಡೆದರೂ ಪರವಾಗಿಲ್ಲ. ಒಂದು ವೇಳೆ, ನಾನು ಅಪರಾಧಿಯಂತಾದಲ್ಲಿ ನನ್ನನ್ನು ಗಲ್ಲಿಗೇರಿಸಿ ಎಂದು ಗುಡುಗಿದ್ದಾರೆ.
 
ಸೋನೆಪತ್‌ನಲ್ಲಿ ತರಬೇತಿ ಪಡೆಯುತ್ತಿರುವ ಸಂದರ್ಭದಲ್ಲಿ ನನ್ನ ಕುಡಿಯು ನೀರು, ಆಹಾರಗಳಲ್ಲಿ ಕೆಲ ಔಷಧಿಗಳನ್ನು ಬೆರಸಿರುವ ಸಾಧ್ಯತೆಗಳಿವೆ. ಇದನ್ನು ನಾಡಾ ಕೂಡಾ ಒಪ್ಪಿಕೊಂಡಿದ್ದರಿಂದಲೇ ನನಗೆ ರಿಯೋ ಒಲಿಂಪಿಕ್ಸ್‌ಗೆ ತೆರಳಲು ಅನುಮತಿ ನೀಡಿತ್ತು ಎಂದು ನರಸಿಂಗ್ ಯಾದವ್ ಹೇಳಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ