ನರಸಿಂಗ್ ಯಾದವ್ ಬೆಳ್ಳಿ ಪದಕ ಗೆಲ್ಲುವ ಸಾಧ್ಯತೆಯಿತ್ತು: ಕುಸ್ತಿ ಒಕ್ಕೂಟದ ಅಧಿಕಾರಿ

ಶುಕ್ರವಾರ, 26 ಆಗಸ್ಟ್ 2016 (20:21 IST)
ಭಾರತದ ಕುಸ್ತಿ ಒಕ್ಕೂಟ ಉದ್ದೀಪನ ಮದ್ದು ಸೇವನೆಯಿಂದ ಕಳಂಕಿತರಾದ ನರಸಿಂಗ್ ಯಾದವ್ ಅವರ ಬೆಂಬಲ ಮುಂದುವರಿಸಿದ್ದು, ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದರೆ ನರಸಿಂಗ್ ಯಾದವ್ ಬೆಳ್ಳಿ ಪದಕವನ್ನು ಗೆಲ್ಲುವ ಸಾಧ್ಯತೆಯಿತ್ತು ಎಂದು ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದರು.
 
 ನರಸಿಂಗ್ ಅವರನ್ನು ಡೋಪಿಂಗ್ ಆರೋಪದಿಂದ ನಾಡಾ ಮುಕ್ತಿಗೊಳಿಸಿದ ಬಳಿಕ  ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ವಾಡಾ ಕ್ರೀಡಾನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
 
 ಸಿಎಎಸ್ ನರಸಿಂಗ್ ಅವರನ್ನು ಆಟದಿಂದ ಹೊರಹಾಕಿದ್ದಲ್ಲದೇ ನಾಲ್ಕುವರ್ಷಗಳ ನಿಷೇಧ ಕೂಡ ವಿಧಿಸಿತು. ನರಸಿಂಗ್ ಪ್ರತಿಪಾದಿಸಿದ್ದ ಪಿತೂರಿಗೆ ನೈಜ ಸಾಕ್ಷ್ಯಾಧಾರ ಹಾಜರುಪಡಿಸಲು ಅವರು ವಿಫಲರಾಗಿದ್ದರಿಂದ ಈ ಕ್ರಮ ಕೈಕೊಂಡಿದೆ. ತಾತ್ಕಾಲಿಕ ಸಮಿತಿಯು ತನ್ನ ತೀರ್ಪಿನಲ್ಲಿ ನರಸಿಂಗ್ ಅವರ ಉದ್ದೀಪನ ಮದ್ದು ಸೇವನೆ ಅಪರಾಧವು ಒಂದು ಬಾರಿ ಸೇವಿಸಿದ್ದರಿಂದ ಉಂಟಾಗಿಲ್ಲ. ಮೊದಲ ಪರೀಕ್ಷೆ ಫಲಿತಾಂಶದಲ್ಲಿ ಅದರ ಪ್ರಮಾಣ ಅಧಿಕವಾಗಿದ್ದು ಮೆಥಡಿಯನೋನ್‌ನ ಒಂದೆರಡು ಮಾತ್ರೆಗಳನ್ನು ಬಾಯಿ ಮೂಲಕ ಸೇವಿಸಿದ್ದರಿಂದ ಉಂಟಾಗಿದೆಯೇ ಹೊರತು ನೀರಿಗೆ ಪುಡಿಯನ್ನು ಮಿಶ್ರಣಮಾಡಿದ್ದರಿಂದ ಉಂಟಾಗಿಲ್ಲ ಎಂದು ತಜ್ಞರ ಸಾಕ್ಷ್ಯಾಧಾರವನ್ನು ಆಧರಿಸಿ ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.

ವೆಬ್ದುನಿಯಾವನ್ನು ಓದಿ