ಕಬಡ್ಡಿ ವಿಶ್ವಕಪ್ ಗೆದ್ದವರಿಗೆ ಹತ್ತೇ ಲಕ್ಷ!

ಶುಕ್ರವಾರ, 28 ಅಕ್ಟೋಬರ್ 2016 (09:16 IST)
ಮುಂಬೈ: ಕ್ರಿಕೆಟ್ ನಲ್ಲೋ, ಒಲಿಂಪಿಕ್ಸ್ ನಲ್ಲೋ ಪದಕ ಗೆದ್ದರೆ ಕೋಟಿ, ಲಕ್ಷಗಟ್ಟಲೆ ಹಣ ನೀಡುವ ಸರ್ಕಾರ ಕಬಡ್ಡಿ ವಿಶ್ವಕಪ್ ಗೆದ್ದವರಿಗೆ ಕೊಟ್ಟಿದ್ದು ಕೇವಲ 10 ಲಕ್ಷ ರೂ.

ಇದು ತೀರಾ ಕಡಿಮೆಯಾಯಿತು ಎಂದು ಭಾರತ ಕಬಡ್ಡಿ ತಂಡದ ಸ್ಟಾರ್ ಆಟಗಾರ ಅಜಯ್ ಠಾಕೂರ್ ಕಿಡಿ ಕಾರಿದ್ದಾರೆ.  ಭಾರತದಲ್ಲಿ ಕಬಡ್ಡಿ ಈಗ ಪರಿಚಿತ. ಈ ಕ್ರೀಡೆಯನ್ನೂ ಇಷ್ಟಪಡುವವರೂ ಸಾಕಷ್ಟು ಜನ ಇದ್ದಾರೆಂದು ವಿಶ್ವಕಪ್ ಸಂದರ್ಭದಲ್ಲಿ ಸಾಬೀತಾಗಿದೆ. ಆದರೆ ಯಾವುದೇ ರಾಜ್ಯ ಸರ್ಕಾರಗಳು ಅಥವಾ ಸಂಸ್ಥೆಗಳು ಬಹುಮಾನ ಮೊತ್ತ ಘೋಷಿಸಿಲ್ಲ. 

ಕೇಂದ್ರ ಸರ್ಕಾರ ಇಡೀ ತಂಡಕ್ಕೆ ಕೇವಲ 10 ಲಕ್ಷ ರೂ ಕೊಟ್ಟು ಕೈ ತೊಳೆದುಕೊಂಡಿದೆ. ಇದನ್ನು ಸಮನಾಗಿ ಹಂಚಿದರೆ ಸಿಗುವ ಹಣ ಏತಕ್ಕೂ ಸಾಲದು. ವಿಶ್ವಕಪ್ ಗೆದ್ದ ನಮಗೆ ಇಷ್ಟೇ ಪ್ರೋತ್ಸಾಹವೇ? ಎಂದು ಭಾರತದ ಗೆಲುವಿನಲ್ಲಿ ಮಿಂಚಿದ್ದಅಜಯ್ ನೋವಿನಿಂದ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ