ಕೊರಿಯಾ ಓಪನ್ ಸೆಮಿಫೈನಲ್ ಗೆ ಪಿ. ಕಶ್ಯಪ್

ಶನಿವಾರ, 10 ಡಿಸೆಂಬರ್ 2016 (09:04 IST)
ಕೊರಿಯಾ: ಕಾಮನ್ ವೆಲ್ತ್ ಗೇಮ್ಸ್ ಚಾಂಪಿಯನ್ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ. ಕಶ್ಯಪ್ ಕೊರಿಯಾ ಓಪನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಅವರು ಕೊರಿಯಾದ ಜಿಯೊನ್ ಹಾಯ್ಕ್ ಅವರನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.

ಕ್ವಾರ್ಟರ್ ಫೈನಲ್ ನಲ್ಲಿ 18-21, 21-8, 21-16 ಅಂತರದಿಂದ ಗೆಲುವು ಸಾಧಿಸಿದರು.  ಈ ಪಂದ್ಯ ಸುಮಾರು ಒಂದು ಗಂಟೆಗಳ ಕಾಲ ಹೋರಾಟ ನಡೆಯಿತು. ಅಂತಿಮವಾಗಿ ಕಶ್ಯಪ್ ಮೇಲುಗೈ ಸಾಧಿಸಿದರು. ಸೆಮಿಫೈನಲ್ ನಲ್ಲಿ ಕೊರಿಯಾದ ಸಾನ್ ವಾನ್ ಹೊ  ಅವರನ್ನು ಎದುರಿಸಲಿದ್ದಾರೆ.

ಕೊರಿಯಾ ಓಪನ್ ನ ಸಿಂಗಲ್ಸ್ ವಿಭಾಗದಲ್ಲಿ ಗೆದ್ದ ಆಟಗಾರನಿಗೆ ಯುಎಸ್ ಡಾಲರ್ 120,000 ಬಹುಮಾನ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ