ಕಾಮನ್ ವೆಲ್ತ್ ಗೇಮ್ಸ್: ಸೆಮಿಫೈನಲ್ ಗೆದ್ದ ಕ್ವೀನ್ ಪಿ.ವಿ. ಸಿಂಧುವಿಗೆ ಈಗ ಚಿನ್ನವೇ ಗುರಿ

ಭಾನುವಾರ, 7 ಆಗಸ್ಟ್ 2022 (16:37 IST)
ಬರ್ಮಿಂಗ್ ಹ್ಯಾಮ್: ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕಾಮನ್ ವೆಲ್ತ್ ಗೇಮ್ಸ್ ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಗಾಪುರದ ಯಿಯೊ ಜಿಯಾ ಮಿನ್ ವಿರುದ್ಧ 21-19, 21-17 ಅಂತರದಿಂದ ಗೆಲುವು ಸಾಧಿಸಿದರು.

ಇಂದೂ ಕೂಡಾ ಸಿಂಧುಗೆ ಗೆಲುವು ಸುಲಭವಾಗಿರಲಿಲ್ಲ. ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲಾ ಬಾಣಗಳನ್ನು ಪ್ರಯೋಗ ಮಾಡಬೇಕಾಗಿ ಬಂದಿತ್ತು. ಮೊದಲ ಸೆಟ್ ನಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಸಿಂಧು ಬಳಿಕ ಚೇತರಿಸಿಕೊಂಡರು. ಹಾಗಿದ್ದರೂ ಎದುರಾಳಿಯಿಂದ ಭಾರೀ ಪೈಪೋಟಿ ಸಿಕ್ಕಿತ್ತು. ಕೊನೆಗೂ ಗೆದ್ದ ಸಿಂಧು ಈಗ ಚಿನ್ನದ ಪದಕದ ಕನಸು ಜೀವಂತವಾಗಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ