ತೀವ್ರ ಕುತೂಹಲ ಕೆರಳಿಸಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಜಪಾನ್ ನ, ವಿಶ್ವ ನಂ. 4 ನೇ ಶ್ರೇಯಾಂಕಿತೆ ಯಮಗುಚಿ ವಿರುದ್ಧ 21-13, 22-20 ಅಂತರದಿಂದ ಗೆಲುವು ಸಾಧಿಸಿದರು.
ಪಂದ್ಯದಕ್ಕೂ ತೀವ್ರ ಒತ್ತಡ, ಕೊನೆಯಲ್ಲಿ ಉಸಿರು ಬಿಗಿ ಹಿಡಿದ ಕ್ಷಣಗಳು. ಕೊನೆಗೂ ಮ್ಯಾಚ್ ಪಾಯಿಂಟ್ ನಲ್ಲಿ ಗೆಲುವು ಸಾಧಿಸಿದಾಗ ಸಿಂಧು ಜೊತೆಗೆ ವೀಕ್ಷಕರ ಎದೆಯಲ್ಲಿದ್ದ ಕೌತುಕವೂ ಮೇರೆ ಮೀರಿತ್ತು.
ಮೊದಲ ಸೆಟ್ ನಲ್ಲಿ ಅದ್ಭುತ ಸ್ಮ್ಯಾಶ್ ಗಳ ಮೂಲಕ ಎದುರಾಳಿಯನ್ನು ಸುಲಭವಾಗಿ ಮಣಿಸಿದ ಸಿಂಧುವಿಗೆ ಎರಡನೇ ಸೆಟ್ ಸುಲಭವಾಗಿರಲಿಲ್ಲ. ಒಂದು ಹಂತದಲ್ಲಿ ಸಿಂಧು ಎರಡು ಅಂಕಗಳ ಹಿನ್ನಡೆಯಲ್ಲಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಒತ್ತಡ ನಿಭಾಯಿಸಲು ಯಶಸ್ವಿಯಾದ ಸಿಂಧು ಎದುರಾಳಿಗೆ ಸೆಡ್ಡು ಹೊಡೆದರು. ಪರಿಣಾಮ ಸ್ಕೋರ್ 20-20 ಕ್ಕೆ ಬಂದು ನಿಂತಿತು. ಈ ಹಂತದಲ್ಲಿ ಮತ್ತೆ ಸಿಂಧು ತಮ್ಮೆಲ್ಲಾ ಅನುಭವದ ಧಾರೆಯೆರೆದು ಪಂದ್ಯವನ್ನು ತಮ್ಮದಾಗಿಸಿಕೊಂಡರು.