ಅನ್ಯಾಯವಾಗಿದ್ದರೂ ಮೇರಿ ಕೋಮ್ ಪ್ರಶ್ನೆ ಮಾಡುವಂತಿಲ್ಲ!

ಶುಕ್ರವಾರ, 30 ಜುಲೈ 2021 (11:02 IST)
ಟೋಕಿಯೋ: ಮಹಿಳೆಯರ ಬಾಕ್ಸಿಂಗ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮ್ಮ ವಿರುದ್ಧ ಬಂದಿರುವ ತೀರ್ಪನ್ನು ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಪ್ರಶ್ನೆ ಮಾಡುವಂತಿಲ್ಲ!


ಮೇರಿ ಎರಡು ಸುತ್ತಿನಲ್ಲಿ ಜಯಗಳಿಸಿದ್ದರೂ ಅಂಕಗಳ ಆಧಾರದಲ್ಲಿ ಸೋತಿರುವುದಾಗಿ ತೀರ್ಪುಗಾರರು ನೀಡರುವ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದರೆ ಇದನ್ನು ಅಧಿಕೃತವಾಗಿ ಅವರಿಗೆ ಕಾನೂನಾತ್ಮಕವಾಗಿ ಪ್ರಶ್ನೆ ಮಾಡಲು ಸಾಧ‍್ಯವಿಲ್ಲ.

ನಿಯಮಗಳ ಪ್ರಕಾರ ಸೋತ ಆಟಗಾರ ತೀರ್ಪು ಪ್ರಶ್ನಿಸುವ ಅಥವಾ ಪುನರ್ ಪರಿಶೀಲಿಸಲು ಮನವಿ ಮಾಡುವ ಅಧಿಕಾರವೇ ಇಲ್ಲ. ಹೀಗಾಗಿ ಮೇರಿಗೆ ತೀರ್ಪುಗಾರರ ಅನ್ಯಾಯದ ವಿರುದ್ಧ ಅಧಿಕೃತವಾಗಿ ಹೋರಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆಯೂ ಹಲವು ಬಾರಿ ಬಾಕ್ಸರ್ ಗಳಿಗೆ ಇಂತಹ ಅನ್ಯಾಯಗಳಾಗಿವೆ. ಅವಕಾಶವಿದ್ದಿದ್ದರೆ ಖಂಡಿತಾ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೆ ಎಂದು ಮೇರಿ ಹೇಳಿದ್ದಾರೆ. ಇನ್ನು, ಮೇರಿಗೆ ಆದ ಅನ್ಯಾಯದ ವಿರುದ್ಧ ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡಾ ಧ್ವನಿಯೆತ್ತಿದ್ದಾರೆ. ಭಾರತೀಯರಲ್ಲಿ ಈಗ ಈ ಪಂದ್ಯದ ತೀರ್ಪಿನ ಬಗ್ಗೆ ತೀವ್ರ ಆಕ್ರೋಶ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ