ತನ್ನದೇ ದೇಶವನ್ನು ಕ್ರೀಡೆಗೆ ನಾಲಾಯಕ್ಕು ಎಂದು ವಿವಾದಕ್ಕೀಡಾದ ಪಾಕಿಸ್ತಾನಿ ಕಾಮೆಂಟೇಟರ್ ರಮೀಜ್ ರಾಜಾ

ಬುಧವಾರ, 1 ಫೆಬ್ರವರಿ 2017 (10:12 IST)
ಮೆಲ್ಬೋರ್ನ್:  ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯಾವಳಿ ವಿಶ್ವದಾದ್ಯಂತ ಸುದ್ದಿ ಮಾಡಿತ್ತು. ಕಾರಣ ವಿಶ್ವ ವಿಖ್ಯಾತ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಆಡಿದ್ದರಿಂದ. ಆದರೆ ಪಾಕಿಸ್ತಾನಿಯರಿಗೆ ಮಾತ್ರ ಈ ಭಾಗ್ಯವಿರಲಿಲ್ಲ.

 
ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಚಾನೆಲ್ ಗಳು ಈ ಪಂದ್ಯದ ನೇರಪ್ರಸಾರ ಮಾಡಿದ್ದವು. ಆದರೆ ಪಾಕಿಸ್ತಾನದಲ್ಲಿ ಯಾವ ಚಾನೆಲ್ ಗಳೂ ಇಂತಹ ಮಹತ್ವದ ಪಂದ್ಯವನ್ನು ಪ್ರಸಾರ ಮಾಡಲೇ ಇಲ್ಲ.

ಇದರಿಂದ ಬೇಸತ್ತ ಕ್ರಿಕೆಟ್ ವೀಕ್ಷಕ ವಿವರಣೆಕಾರ ಪಾಕಿಸ್ತಾನದ ರಮೀಜ್ ರಾಜಾ ತಮ್ಮ ಟ್ವಿಟರ್ ಪೇಜ್ ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.  ಪಾಕಿಸ್ತಾನ ಇಷ್ಟೊಂದು ಕ್ರೀಡಾ ಸ್ನೇಹಿಯಲ್ಲದ ರಾಷ್ಟ್ರ ಎನ್ನಲು ನಾಚಿಕೆಯಾಗುತ್ತದೆ.  ಯಾವುದೇ ಚಾನೆಲ್ ಗಳು ರೋಜರ್ ಫೆಡರರ್ ರ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಐತಿಹಾಸಿಕ ಪಂದ್ಯವನ್ನು ಪ್ರಸಾರ ಮಾಡದೇ ಇರುವುದು ನಾಚಿಕೆಗೇಡಿನ ವಿಷಯ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಹಲವು ಜನ ಪ್ರತಿಕ್ರಿಯಿಸಿದ್ದು, ರಮೀಜ್ ಪರ ಕೆಲವರು ಮಾತನಾಡಿದ್ದಾರೆ. ಇನ್ನು ಕೆಲವರು ಪಾಕಿಸ್ತಾನದ ಅವಸ್ಥೆಯನ್ನು ಅಣಕ ಮಾಡಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಭಾರತೀಯರು ಎನ್ನುವುದು ಉಲ್ಲೇಖನೀಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ