ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾನುವಾರ ಮನು ಭಾಕರ್ ಕಂಚಿಕ ಪದಕವನ್ನು ಪಡೆಯುವುದರೊದಿಗೆ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ.
ಈ ಮೂಲಕ ಭಾರತೀಯ ಕ್ರೀಡಾಳುಗಳು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಇದೀಗ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಚಿನ್ನದ ಭೇಟೆಗೆ ಮೊದಲ ಹೆಜ್ಜೆಯಿಟ್ಟಿದ್ದಾರೆ.
ಮಾಲ್ಡೀವ್ಸ್ನ ಫಾತಿಮಾ ನಬ್ಹಾ ಅಬ್ದುಲ್ ರಜಾಕ್ ವಿರುದ್ಧ ನಡೆದ ಪಂದ್ಯಾಟದಲ್ಲಿ ಫಾತಿಮಾರನ್ನು ಪಿವಿ ಸಿಂಧು ಮಣಿಸಿದ್ದಾರೆ. ಕೇವಲ 29 ನಿಮಿಷಗಳಲ್ಲಿ ಫಾತಿಮಾ ವಿರುದ್ಧ ಸುಲಭ ಗೆಲುವು ಸಾಧಿಸಿ ಗೆಲುವಿನತ್ತ ಹೆಜ್ಜೆಯಿಟ್ಟಿದ್ದಾರೆ.
ಎರಡು ಸುತ್ತಿನ ಆಟದಲ್ಲಿ 21-9, 21-6 ಪಾಯಿಂಟ್ಸ್ ಅಂತರದಲ್ಲಿ ಫಾತಿಮಾ ವಿರುದ್ಧ ಗೆಲುವು ದಾಖಲಿಸಿಕೊಳ್ಳುವುದರ ಮೂಲಕ ಸಿಂಧು ಶುಭಾರಂಭ ಮಾಡಿದ್ದಾರೆ.