ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನದಿಯೊಂದರ ಮೇಲೆ ಉದ್ಘಾಟನಾ ಸಮಾರಂಭ ನಡೆದಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ಯಾರಿಸ್ ನ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶಿಸಲಾಯಿತು. ಎಲ್ಲಾ ದೇಶಗಳ ಕ್ರೀಡಾಪಟುಗಳು ಪಥಸಂಚಲನದಲ್ಲಿ ಭಾಗಿಯಾದರು. ಭಾರತದ ನಿಯೋಗವನ್ನು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮುನ್ನಡೆಸಿದರು. ಟಿಟಿ ತಾರೆ ಶರತ್ ಕಮಲ್ ಸೇರಿದಂತೆ ಕ್ರೀಡಾಪಟುಗಳು ಭಾರತೀಯ ಧ್ವಜ ಹಿಡಿದು ಮುನ್ನಡೆದರು.
ಇಂದಿನ ಭಾರತದ ಪಂದ್ಯಗಳ ವಿವರ ಇಲ್ಲಿದೆ:
ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್, ಪ್ರಣಯ್, ಲಕ್ಷ ಸೇನ್
ಮಹಿಳೆಯರ ಸಿಂಗಲ್ಸ್: ಪಿವಿ ಸಿಂಧು
ಡಬಲ್ಸ್: ಸಾಯಿರಾಜ್-ಚಿರಾಗ್ ಶೆಟ್ಟಿ
ಮಹಿಳಾ ಡಬಲ್ಸ್: ತನಿಷಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ
ಸಮಯ ಮಧ್ಯಾಹ್ನ 12.30 ಕ್ಕೆ
ರೋಯಿಂಗ್: ಪುರುಷರ ಸಿಂಗಲ್ಸ್ ಸ್ಕಲ್ಸ್ ಹೀಟ್ಸ್: ಬಲರಾ್ ಪನ್ವರ್ ಸಮಯ ಮಧ್ಯಾಹ್ನ 12.30
ಶೂಟಿಂಗ್: 10 ಮೀ. ಏರ್ ಪಿಸ್ತೂಲ್ ಮಿಶ್ರತಂಡ
ಸಮಯ ಮಧ್ಯಾಹ್ನ 12.30 (ಅರ್ಹತಾ ಸುತ್ತು) ಮತ್ತು ಮಧ್ಯಾಹ್ನ 2.00 (ಪದಕ ಸುತ್ತು)
ಟೆನಿಸ್: ಪುರುಷರ ಸಿಂಗಲ್ಸ್ ಸಮಿತ್ ನಾಗಲ್
ಪುರುಷರ ಡಬಲ್ಸ್ ರೋಹನ್ ಬೋಪಣ್ಣ-ಬಾಲಾಜಿ ಮಧ್ಯಾಹ್ನ 3.30 ಕ್ಕೆ
ಟೇಬಲ್ ಟೆನಿಸ್
ಪುರುಷರ ಸಿಂಗಲ್ಸ್ ಅಚಂತ ಶರತ್, ಹರ್ಮಿತ್ ದೇಸಾಯಿ
ಸಮಯ: ಸಂಜೆ 6.30 ಕ್ಕೆ
ಬಾಕ್ಸಿಂಗ್: ಮಹಿಳೆಯರ 54 ಕೆ.ಜಿ. ಪ್ರೀತಿ ಪವಾರ್
ಸಮಯ: ಸಂಜೆ 7 ಗಂಟೆ
ಪುರುಷರ ಹಾಕಿ
ಭಾರತ-ನ್ಯೂಜಿಲೆಂಡ್
ಸಮಯ ರಾತ್ರಿ 9.00