ಭವಿನಾ ಪಟೇಲ್ ಜೀವನ ನಮಗೆ ಆದರ್ಶ: ಪ್ರಧಾನಿ ಮೋದಿ ಹೊಗಳಿಕೆ

ಭಾನುವಾರ, 29 ಆಗಸ್ಟ್ 2021 (09:39 IST)
ನವದೆಹಲಿ: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಟೇಬಲ್ ಟೆನಿಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ತಂದ ಭಾರತದ ಮಹಿಳಾ ತಾರೆ ಭವಿನಾ ಪಟೇಲ್ ಗೆ ಪ್ರಧಾನಿ ಮೋದಿ ಹೊಗಳಿಕೆ ನೀಡಿದ್ದಾರೆ.


ಟ್ವಿಟರ್ ಮೂಲಕ ಭವಿನಾ ಸಾಧನೆಯನ್ನು ಕೊಂಡಾಡಿರುವ ಪ್ರಧಾನಿ ಮೋದಿ, ‘ಆಕೆಯ ಜೀವನವೇ ನಮಗೆ ಸ್ಪೂರ್ತಿ’ ಎಂದು ಕೊಂಡಾಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಸೋತ ಭವಿನಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಹಾಗಿದ್ದರೂ ಇದು ಭಾರತದ ಪಾಲಿಗೆ ಟೇಬಲ್ ಟೆನಿಸ್ ವಿಭಾಗದಲ್ಲಿ ದಾಖಲೆಯಾಗಿದೆ.

ಆಕೆಯ ಸಾಧನೆಯನ್ನು ಅಭಿನಂದಿಸಿರುವ ಪ್ರಧಾನಿ ಮೋದಿ, ‘ಭವಿನಾ ಪಟೇಲ್ ಇಂದು ಇತಿಹಾಸ ರಚಿಸಿದರು. ಅವರು ತವರಿಗೆ ಐತಿಹಾಸಿಕ ಬೆಳ್ಳಿ ಸಾಧನೆಯೊಂದಿಗೆ ಮರಳಲಿದ್ದಾರೆ. ಆಕೆಯ ಜೀವನ ನಮಗೆಲ್ಲಾ ಸ್ಪೂರ್ತಿ. ಇದರಿಂದ ಯುವಜನತೆ ಪ್ರೇರಣೆಗೊಳ್ಳಲಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ