ಪ್ಯಾರಾಲಿಂಪಿಕ್ಸ್ ಟಿಟಿ: ಫೈನಲ್ ನಲ್ಲಿ ಸೋತರೂ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭವಿನಾ

ಭಾನುವಾರ, 29 ಆಗಸ್ಟ್ 2021 (09:15 IST)
ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಭವಿನಾ ಪಟೇಲ್ ಟೇಬಲ್ ಟೆನಿಸ್ ವಿಭಾಗದಲ್ಲಿ ಫೈನಲ್ ನಲ್ಲಿ ಚೀನಾದ ಝೋ ಯಿಂಗ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Photo Courtesy: Google

ಹಾಗಿದ್ದರೂ ಟೇಬಲ್ ಟೆನಿಸ್ ಇತಿಹಾಸದಲ್ಲೇ ಇದು ಭಾರತದ ಪಾಲಿಗೆ ಐತಿಹಾಸಿಕ ಸಾಧನೆಯಾಗಿದೆ. ಪ್ಯಾರಾಲಿಂಪಿಕ್ಸ್ ಮಾತ್ರವಲ್ಲ, ಒಲಿಂಪಿಕ್ಸ್ ನಲ್ಲಿಯೂ ಇದುವರೆಗೆ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತ ಪದಕ ಗೆದ್ದಿರಲಿಲ್ಲ.

ಆದರೆ ಭವಿನಾ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಂದು ಬೆಳಿಗ್ಗೆ ನಡೆದ ಪಂದ್ಯದಲ್ಲಿ ಚೀನಾ ಆಟಗಾರ್ತಿಯ ಎದುರು ಭವಿನಾ ಸೋತರೂ ಆಕೆಯ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ