ಹೌದು, ಅಹಮದಾಬಾದ್ ನಿವಾಸಿ ಮನಿಲಾಲ್ ಗೋಹಿಲ್ ತನ್ನ ಏಕೈಕ ಪುತ್ರಿಯ ಕನಸನ್ನು ಈಡೇರಿಸುವುದಕ್ಕಾಗಿ, ಆಕೆಯ ಮದುವೆಗಾಗಿ ಕೂಡಿಟ್ಟ ಹಣವನ್ನು ರೈಫಲ್ ಕೊಡಿಸಲು ವಿನಿಯೋಗಿಸಿದ್ದಾನೆ.
ಅಪ್ಪ ಮತ್ತು ಮಗಳು ರೈಫಲ್ ಹೊಂದುವ ಪರವಾನಿಗೆ ಪಡೆಯಲು ಸ್ಥಳೀಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಹೋದಾಗ, ಅಲ್ಲಿನ ಅಧಿಕಾರಿಗಳು ದಂಗು ಬಡಿದು ಹೋದರು. ಬಡ ರಿಕ್ಷಾ ಚಾಲಕ ತನ್ನ ಮಗಳಿಗೆ ಅಷ್ಟೊಂದು ದುಬಾರಿ ರೈಫಲ್ ಕೊಡಿಸುತ್ತಿರುವುದನ್ನು ಅವರಿಂದ ನಂಬಲಾಗಲಿಲ್ಲ. ಮನಿಲಾಲ್‌ನನ್ನು ತುಂಬು ಮನಸ್ಸಿಂದ ಹೊಗಳಿದ ಅವರು ಅಗತ್ಯ ಪರವಾನಿಗೆಯನ್ನು ಪಡೆಯಲು ಸಹಾಯ ಮಾಡಿದರು.