ಒಲಿಂಪಿಕ್ ಚಿನ್ನಕ್ಕಾಗಿ ನೇಮರ್ ಮೇಲೆ ಬ್ರೆಜಿಲ್ ಕೋಚ್ ಅವಲಂಬನೆ

ಬುಧವಾರ, 20 ಜುಲೈ 2016 (14:26 IST)
ರಿಯೊ ಒಲಿಂಪಿಕ್ಸ್‌ನಲ್ಲಿ ಮುಂದಿನ ತಿಂಗಳು ಚಿನ್ನದ ಪದಕ ಗೆಲ್ಲಲು  ಬಾರ್ಸೆಲೋನಾ ಸ್ಟಾರ್ ಫಾರ್ವರ್ಡ್ ನೇಮರ್ ಅವರನ್ನು ನೆಚ್ಚಿಕೊಂಡಿರುವುದಾಗಿ ಬ್ರೆಜಿಲ್ ಒಲಿಂಪಿಕ್ ಕೋಚ್ ಮಂಗಳವಾರ ತಿಳಿಸಿದ್ದಾರೆ. ಬ್ರೆಜಿಲ್ ತಂಡ ಕೊಪಾ ಅಮೆರಿಕಾದಲ್ಲಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನ್ನು ಅನುಭವಿಸಿ ಕೋಚ್ ಡುಂಗಾ ಅವರನ್ನು ವಜಾ ಮಾಡಿದ ಬಳಿಕ  ಪ್ರಸಕ್ತ ಅಂಡರ್ 20 ಕೋಚ್ ರೊಜೆರಿಯೊ ಮೈಕೇಲ್‌ಗೆ ರಿಯೊದಲ್ಲಿ ಬ್ರೆಜಿಲ್ ಫುಟ್ಬಾಲ್ ಪುನಶ್ಚೇತನಕ್ಕಾಗಿ ಕೋಚ್ ಉಸ್ತುವಾರಿ ವಹಿಸಲಾಗಿದೆ.
 
ನಾನು ಬ್ರೆಜಿಲ್ ಚಿನ್ನದ ಪದಕ ಗೆಲ್ಲಲು ನೇಮರ್ ಮೇಲೆ ಅವಲಂಬಿತನಾಗಿದ್ದೇನೆ ಎಂದು ತಂಡವು ರಿಯೊ ಕ್ರೀಡಾಕೂಟಕ್ಕಾಗಿ ಮೊದಲ ತರಬೇತಿ ಸೆಷನ್ ಪೂರೈಸುವಾಗ ಹೇಳಿದರು.
 
ನೇಮರ್ ತಂಡದಲ್ಲಿ ಬಯಸದ ಕೋಚ್ ಯಾರಿದ್ದಾರೆ. ನೇಮರ್ ಮೇಲೆ ಅವಲಂಬಿತರಾಗುವುದು ಸರಿಯಲ್ಲ ಎನ್ನುತ್ತಾರೆ. ಆದರೆ ನಾನು ಅದಕ್ಕೆ ಒಪ್ಪುವುದಿಲ್ಲ. ನೇಮರ್ ನಮ್ಮ ತಂಡದಲ್ಲಿರಬೇಕೆಂದು ನಾನು ಬಯಸುತ್ತೇನೆ ಎಂದು ಮೈಕೇಲ್ ಹೇಳಿದರು. ಮೈಕೇಲ್ ನಿಲುವು ಡುಂಗಾಗೆ ಅಪ್ಪಟ ವಿರುದ್ಧವಾಗಿದ್ದು, ಬ್ರೆಜಿಲ್ ತಂಡ ಏಕ ವ್ಯಕ್ತಿ ತಂಡವಲ್ಲ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ