ಭಾರತದ ಅಥ್ಲೆಟಿಕ್ಸ್ ಕೋಚ್ ಸ್ನೇಸರೇವ್ ಬಂಧನ, ಬಿಡುಗಡೆ

ಮಂಗಳವಾರ, 16 ಆಗಸ್ಟ್ 2016 (13:00 IST)
ರಿಯೊ ಒಲಿಂಪಿಕ್ಸ್ ಗ್ರಾಮದ ಪಾಲಿಕ್ಲಿನಿಕ್‌ನಲ್ಲಿ ಮಹಿಳಾ ವೈದ್ಯೆಯೊಬ್ಬರು ದುರ್ವರ್ತನೆಯ ದೂರು ನೀಡಿದ ಮೇಲೆ ಭಾರತದ ಅಥ್ಲೆಟಿಕ್ಸ್ ತಂಡದ ಕೋಚ್ ನಿಕೋಲಾಯ್ ಸ್ನೆಸರೇವ್ ಅವರನ್ನು ಅರ್ಧ ದಿನಗಳ ಕಾಲ ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದಾರೆ.

ಲಲಿತಾ ಬಾಬರ್, ಸುಧಾ ಸಿಂಗ್ ಮತ್ತು ಓಪಿ ಜೈಷಾ ಅವರಿಗೆ ತರಬೇತಿ ನೀಡಿದ ಸ್ನೇಸರೇವ್ ಅವರನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಬಳಿಕ ಬ್ರೆಜಿಲ್‌ನ ಭಾರತದ ಎಂಬಸಿ ಮಧ್ಯಪ್ರವೇಶದಿಂದ ಅವರನ್ನು ಬಿಡುಗಡೆ ಮಾಡಲಾಯಿತು.
 
ಮ್ಯಾರಥಾನ್ ರೇಸ್‌ನಲ್ಲಿ ತೀವ್ರ ಬಿಸಿಲಿನ ತಾಪಮಾನದಿಂದ ಭಾರತದ ಓಟಗಾರ್ತಿ ಒಪಿ ಜೈಷಾ ಬಳಲಿಕೆಯಿಂದ ಕುಸಿಯುವ ಹಂತದಲ್ಲಿದ್ದರು. ಅವರನ್ನು ಕ್ರೀಡಾಗ್ರಾಮದ ಕ್ಲಿನಿಕ್‌ಗೆ ಕರೆದೊಯ್ದಾಗ, ಮಹಿಳಾ ವೈದ್ಯೆ ಸ್ನೆಸರೇವ್‌ಗೆ ಆಸ್ಪತ್ರೆಯೊಳಗೆ ಪ್ರವೇಶಿಸಲು ಬಿಡಲಿಲ್ಲ. ಸ್ನೇಸರೇವ್ ಕೋಪದಿಂದ ವೈದ್ಯೆಯನ್ನು ತಳ್ಳಿ ಆಸ್ಪತ್ರೆಯೊಳಗೆ ತೆರಳಿದ್ದರಿಂದ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ