ಬಾಕ್ಸಿಂಗ್ ಕ್ವಾರ್ಟರ್‌ಫೈನಲ್‌ನಲ್ಲಿ ವಿಕಾಸ್ ಕೃಷ್ಣನ್‌ಗೆ ಸೋಲು

ಮಂಗಳವಾರ, 16 ಆಗಸ್ಟ್ 2016 (11:26 IST)
ಬಾಕ್ಸರ್ ವಿಕಾಸ್ ಕೃಷ್ಣನ್ ಉಜ್ಬೆಕಿಸ್ತಾನದ ಬೆಕ್ತೆಮಿರ್ ಮೆಲಿಕುಜೇವ್‌ಗೆ 75 ಕೆಜಿ ಕ್ವಾರ್ಟರ್ ಫೈನಲ್ ವಿಭಾಗದಲ್ಲಿ ಸೋತಿದ್ದರಿಂದ ವಿಕಾಸ್ ಕೃಷ್ಣನ್ ಅವರ ರಿಯೊ ಒಲಿಂಪಿಕ್ಸ್ ಅಭಿಯಾನಕ್ಕೆ ತೆರೆಬಿದ್ದಿದೆ. ಶಿವ ಥಾಪಾ ಮತ್ತು ಮನೋಜ್ ಕುಮಾರ್ ಕೂಡ ಈಗಾಗಲೇ ಸ್ಪರ್ಧೆಯಿಂದ ನಿರ್ಗಮಿಸಿದ್ದು, ವಿಕಾಸ್ ಸೋಲಿನಿಂದ ಬಾಕ್ಸರ್‌ಗಳು ರಿಯೊದಿಂದ ಪದಕ ಪಡೆಯಲು ವಿಫಲರಾಗಿದ್ದನ್ನು ಸೂಚಿಸುತ್ತದೆ.
 
 ಈ ಜಯದಿಂದ ವಿಕಾಸ್ ಅವರಿಗೆ ಪದಕದ ಭರವಸೆಯಿತ್ತು. ಆದರೆ ಅವರಿಗಿಂತ ಕಿರಿಯ ಆಟಗಾರ ಉಜ್ಬೆಕ್ ಎದುರಾಳಿ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ್ದರಿಂದ ವಿಕಾಸ್ ಸೋಲಪ್ಪಿದರು. 75 ಕೆಜಿ ವಿಭಾಗದಲ್ಲಿ ವಿಜೇಂದರ್ ಸಿಂಗ್ ಅವರೊಬ್ಬರೇ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಏಕಮಾತ್ರ ಬಾಕ್ಸರ್ ಆಗಿ ಉಳಿದಿದ್ದಾರೆ. 2012ರ ರಿಯೊ ಒಲಿಂಪಿಕ್ಸ್‌ನಲ್ಲಿ ಎಂಸಿ ಮೇರಿ ಕಾಮ್ ಕಂಚಿನ ಪದಕ ಗೆದ್ದಿದ್ದರು.
 
 ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ, ಏಳನೇ ಸೀಡ್ ವಿಕಾಸ್ ಅವರು ವಿಶ್ವ ನಂ. 3ನೇ ಆಟಗಾರನಿಗೆ ಸರಿಸಾಟಿಯಾಗಿ ನಿಲ್ಲಲಿಲ್ಲ. ಮೊದಲ ಸುತ್ತಿನ ಬಹುತೇಕ ಭಾಗ ಭಾರತೀತಯ ದಾಳಿ ಮಾಡಲು ಹಿಂಜರಿದರು ಮತ್ತು ಮೆಲಿಕುಜೇವ್ ತಮ್ಮ ಮಾರಕ ಎಡಗೈ ಮುಷ್ಠಿ ಪ್ರಹಾರಗಳಿಂದ ಪಾಯಿಂಟ್‌ಗಳನ್ನು ಸ್ಕೋರ್ ಮಾಡಿದರು.
 
 ಎರಡನೇ ಸುತ್ತಿನಲ್ಲಿ ಮೆಲಿಕುಜೇವ್ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಮೆಲಿಕುಜೇವ್ ಅವರ ಒಂದು ಪ್ರಹಾರಕ್ಕೆ ವಿಕಾಸ್ ಅವರ ಗಮ್ ಶೀಲ್ಡ್ ಬಾಯಿಂದ ಹೊರಬಿದ್ದಿತ್ತು. ವಿಕಾಸ್ ಚೇತರಿಸಿಕೊಳ್ಳುವ ಮುಂಚೆಯೇ  ಎಡಗೈ ಮುಷ್ಠಿ ಪ್ರಹಾರದಿಂದ ವಿಕಾಸ್ ತಬ್ಬಿಬ್ಬಾದರು.
 
 ಮೆಲಿಕುಜೇವ್ ಪ್ರಹಾರಗಳು ಅಷ್ಟೊಂದು ಶಕ್ತಿಶಾಲಿಯಾಗಿದ್ದು, ಇಬ್ಬರು ತೀರ್ಪುಗಾರರು ಎರಡನೇ ಸುತ್ತಿನಲ್ಲಿ ಅವರ ಪರವಾಗಿ 10-8 ಪಾಯಿಂಟ್‌ಗಳನ್ನು ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ