ಸತ್ಯವರ್ತ್ ಜತೆ ಉಂಗುರ ಬದಲಾಯಿಸಿಕೊಂಡ ಸಾಕ್ಷಿ

ಸೋಮವಾರ, 17 ಅಕ್ಟೋಬರ್ 2016 (11:37 IST)
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಗೆಳೆಯ, ಕುತ್ತಿಪಟು ಸತ್ಯವರ್ತ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಭಾನುವಾರ, ರೋಹ್ಟಕ್‌ನಲ್ಲಿ ಇಬ್ಬರ ನಿಶ್ಚಿತಾರ್ಥ ನೆರವೇರಿದ್ದು, ಈ ಸಂದರ್ಭದಲ್ಲಿ ಎರಡು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಸದ್ಯವೇ ಮದುವೆ ಕೂಡ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 
 
ಸತ್ಯವರ್ತ್ ಸಾಕ್ಷಿಗಿಂತ 1 ವರ್ಷ ಚಿಕ್ಕವನಾಗಿದ್ದು ಹರಿಯಾಣಾದ ರೋಹ್ಟಕ್‌ನಲ್ಲಿ ಕುಸ್ತಿಶಾಲೆ ನಡೆಸುತ್ತಿದ್ದಾರೆ. ಅವರ ತಂದೆ ಸತ್ಯವಾನ್ ಅರ್ಜುನ್ ಪ್ರಶಸ್ತಿ ವಿಜೇತ ಕುಸ್ತಿಪಟುವಾಗಿದ್ದರು. 
 
ಕಳೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತ್ಯವರ್ತ್ ಭಾರತಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದರು.
 
ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ದೇಶಾದ್ಯಂತ ಸಂಚಲನ ಹುಟ್ಟಿಸಿದ್ದ ಸಾಕ್ಷಿ ಆ ಸಮಯದಲ್ಲೇ ತಮ್ಮ ಭಾವಿ ಪತಿಯ ಕುರಿತಾದ ಗುಟ್ಟನ್ನು ಹೊರಹಾಕಿದ್ದರು. ತರಬೇತಿ ಕೇಂದ್ರದಲ್ಲಿ ಸಹಪಾಠಿಗಳಾಗಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ