ರಿಯೋ ಒಲಿಂಪಿಕ್ಸ್ 2016- ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶನಿವಾರ, 6 ಆಗಸ್ಟ್ 2016 (13:34 IST)
* ಬ್ರೆಜಿಲ್‌ನಲ್ಲಿ 2016ನೇ ಸಾಲಿನ ರಿಯೋ ಒಲಿಂಪಿಕ್ಸ್ ಅದ್ಧೂರಿ ಸಮಾರಂಭದ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಭಾರತದಿಂದ 118 ಅಥ್ಲೀಟ್‌ಗಳು ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದು, ಒಲಿಂಪಿಕ್ಸ್‌ನ ಸಂಭ್ರಮದ ಕ್ಷಣಗಳು, ಸೋಲು, ಗೆಲುವುಗಳ ವಿಸ್ತ್ರತ ಮಾಹಿತಿ ಕೆಳಗಿವೆ
* ಭಾರತದ ಬಿಲ್ಲುಗಾರ ಅತಾನು ದಾಸ್ ರಿಯೋ ಒಲಿಂಪಿಕ್ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಗಮನಾರ್ಹ ಪ್ರದರ್ಶನ, 683 ಸ್ಕೋರ್‌ನೊಂದಿಗೆ ಐದನೇ ಸ್ಥಾನ
ರಿಯೋ ಒಲಿಂಪಿಕ್ಸ್ ಸಮಾರಂಭಕ್ಕೆ ಬ್ರೆಜಿಲ್ ಮರಕಾನಾ ಸ್ಟೇಡಿಯಂನಲ್ಲಿ ಅದ್ಧೂರಿ ಚಾಲನೆ
* ಭಾರತದ ತಂಡದ ಪರೇಡ್‌ನಲ್ಲಿ ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದ ಒಲಿಂಪಿಕ್ಸ್ ಶೂಟರ್, ಚಿನ್ನದ ಪದಕ ವಿಜೇತ ಅಭಿನವ್ ಭಿಂದ್ರಾ
* ಒಲಿಂಪಿಕ್ಸ್ ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ದತ್ತು ಬೊಕಾನೆಲ್‌ಗೆ ಮೂರನೇ ಸ್ಥಾನ. ದತ್ತು 7: 21.67 ನಿಮಿಷಗಳಲ್ಲಿ ಗುರಿಯನ್ನು ಮುಟ್ಟಿ ಕ್ವಾರ್ಟರ್ ಫೈನಲ್‌ಗೆ ಪ್ರಗತಿ ಸಾಧಿಸಿದರು.
* ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್‌ನಲ್ಲಿ ರಿಯೋ ಒಲಿಂಪಿಕ್ಸ್ ಪ್ರಥಮ ಚಿನ್ನದ ಪದಕವನ್ನು ಅಮೆರಿಕದ ಜಿನ್ನಿ ಥ್ರಾಷರ್ ಮುಡಿಗೇರಿಸಿಕೊಂಡಿದ್ದಾರೆ.
* 9 ಕ್ರೀಡಾಪಟುಗಳು ಮೊದಲ ರೌಂಡ್‌ನಲ್ಲೇ ನಿರ್ಗಮನೊಂದಿಗೆ ರಿಯೋದಲ್ಲಿ ಭಾರತದ ಮೊದಲ ದಿನದ ಅಭಿಯಾನ ನೀರಸವಾಗಿತ್ತು.
* ಬೊಕಾನಲ್ ಪುರುಷರ ಸಿಂಗಲ್ ದೋಣಿ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು ಮತ್ತು ಪುರುಷರ ಹಾಕಿ ತಂಡ ಐರ್ಲೆಂಡ್ ವಿರುದ್ಧ 3-2ರಿಂದ ಜಯಗಳಿಸುವ ಮೂಲಕ ಶುಭಾರಂಭ ಮಾಡಿದೆ.
*ಅಪೂರ್ವಿ ಚಾಂದೇಲಾ ಮತ್ತು ಅಯೋನಿಕಾ ಪಾಲ್ ಹಾಗೂ ಟೆನ್ನಿಸ್ ಜೋಡಿ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಮೊದಲ ಸುತ್ತಿನಲ್ಲೇ ಸೋತು ನಿರಾಸೆಗೊಳಿಸಿದರು.
*ಭಾರತದ ಮೌಮಾ ದಾಸ್, ಮಾನಿಕಾ ಬಾತ್ರಾ, ಸೌಮ್ಯಾ ಘೋಷ್ ಮತ್ತು ಶರತ್ ಕಮಲ್ ಮೊದಲ ಸುತ್ತಿನಲ್ಲೇ ಸೋಲುವುದರೊಂದಿಗೆ ಟೇಬಲ್ ಟೆನಿಸ್‌ನಲ್ಲಿ ಭಾರತದ ಅಭಿಯಾನ ಮೊದಲ ದಿನವೇ ಕೊನೆಗೊಂಡಿತು.
* ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ವೈಯಕ್ತಿಕ ವಾಲ್ಟ್ ಅರ್ಹತಾ ಸುತ್ತಿನಲ್ಲಿ 8ನೇ ಸ್ಥಾನ ಪಡೆದು ವೈಯಕ್ತಿಕ ವಾಲ್ಟ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಜಿಮ್ನಾಸ್ಟಿಕ್ ವಾಲ್ಟ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.
* ಖ್ಯಾತ ಟೆನಿಸ್ ಸ್ಟಾರ್ ನೋವಾಕ್ ಜೋಕೋವಿಕ್ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು. ಅರ್ಜಂಟೈನಾದ ದಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರು 7-6(4), 7-6(2) ಸೆಟ್‌ಗಳಿಂದ ಸೋಲಿಸಿದರು.
* ಚೀನಾದ ಲಾಂಗ್ ಕಿಂಗ್‌ಖಾನ್ ಪುರುಷರ 56 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿ ಚಿನ್ನದ ಪದಕ ಗೆಲುವು. ಇದು ಚೀನಾದ ಮೂರನೇ ಚಿನ್ನದ ಪದಕ ಗೆಲುವು. ತೈವಾನ್ ಚಿಂಗ್ ಸು ಮಹಿಳೆಯರ 53 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ಭಾರತದ ಮಹಿಳಾ ಹಾಕಿ ತಂಡವು ಜಪಾನ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ 2-2ರಿಂದ ಡ್ರಾ.
* ಚೀನಾದ ವೇಟ್‌ಲಿಫ್ಟರ್ ಲಾಂಗ್ ಕಿಂಗ್‌ಕುವಾನ್ ಭಾರ ಎತ್ತುವುದರಲ್ಲಿ 16 ವರ್ಷಗಳಷ್ಟು ಹಳೆಯದಾದ ವಿಶ್ವದಾಖಲೆಯನ್ನು ಮುರಿದು, 56 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
* ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಭಿಂದ್ರಾ ಪುರುಷರ 10 ಮೀ ಏರ್ ರೈಫಲ್ ಸ್ಪರ್ಧೆಯ ಫೈನಲ್‌ನಲ್ಲಿ ಕಂಚಿನ ಪದಕ 0.1 ಅಂಶಗಳಲ್ಲಿ ತಪ್ಪಿಹೋಗಿ ನಾಲ್ಕನೆಯ ಸ್ಥಾನ ಪಡೆದರು.
*ಭಾರತದ ಗಗನ ನಾರಂಗ್ 10 ಮೀ ಏರ್ ರೈಫಲ್ ಶೂಟಿಂಗ್ ಅರ್ಹತಾ ಸುತ್ತಿನಲ್ಲಿ 23ನೇ ಸ್ಥಾನ ಗಳಿಸಿದ್ದರಿಂದ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
*ಭಾರತ ಹಾಕಿತಂಡ ಜರ್ಮನಿ ವಿರುದ್ಧ 2-1 ರಿಂದ ಸೋಲುವ ಮೂಲಕ ನಿರಾಶೆಗೊಳಿಸಿದೆ. ರೋಚಕ ಪಂದ್ಯದಲ್ಲಿ ಜರ್ಮನಿ ಆಟ ಮುಕ್ತಾಯಕ್ಕೆ ಕೇವಲ 3 ಸೆಕೆಂಡುಗಳು ಬಾಕಿವುಳಿದಿರುವಾಗ ಗೋಲು ಗಳಿಸಿ ವಿಜಯ ಸಾಧಿಸಿತು.
* ರಿಯೊ ಒಲಿಂಪಿಕ್ಸ್ ಪುರುಷರ ದೋಣಿ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ದತ್ತು ಬೊಕನಲ್ ನಾಲ್ಕನೇ ಸ್ಥಾನ ಗಳಿಸಿದ್ದು, ಪದಕದ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ದತ್ತು 6: 59.89 ನಿಮಿಷಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಗಳಿಸಿದ ಪೋಲೆಂಡ್ ನಾಟನ್ ವೆಗ್‌ರಿಜ್ಕಿಗಿಂತ 6 ಸೆಕೆಂಡ್ಸ್ ಹಿಂದುಳಿದರು.
* ಭಾರತದ ಮಹಿಳಾ ಹಾಕಿ ತಂಡ ಬ್ರಿಟನ್ ವಿರುದ್ಧ 3-0ಯಿಂದ ಸೋಲಪ್ಪಿದೆ. ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 2-2ರಿಂದ ಡ್ರಾ ಮಾಡಿಕೊಂಡಿತ್ತು.
* ಬಿಲ್ಲುಗಾರ ಅತನು ದಾಸ್, ಪುರುಷರ ಹಾಕಿ ತಂಡ ಹಾಗೂ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಯಶಸ್ಸಿನ ರುಚಿ ತೋರಿಸಿದ್ದಾರೆ.
* ಅತನು ದಾಸ್ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಪ್ರೀ ಕ್ವಾರ್ಟರ್ ಹಂತಕ್ಕೆ ತಲುಪಿ 2 ಗಂಟೆಗಳಲ್ಲಿ 2 ಪಂದ್ಯಗಳನ್ನು ಗೆದ್ದರು. ಮೊದಲಿಗೆ ಅವರು ನೇಪಾಳದ ಬಹಾದುರ್ ಮುಕ್ತನ್ ಅವರನ್ನು 32ನೇ ಸುತ್ತಿನಲ್ಲಿ 6-0ಯಿಂದ ಸೋಲಿಸಿದರು ಮತ್ತು ಕ್ಯೂಬಾದ ಆಡ್ರಿಯಾನ್ ಆಂಡ್ರೆಸ್ ವಿರುದ್ಧ ಸದೃಢ ಪ್ರದರ್ಶನ ನೀಡಿದ ಪಂದ್ಯವನ್ನು 6-4ರಿಂದ ಗೆದ್ದರು.
*ಖ್ಯಾತ ಈಜುಪಟು ಅಮೆರಿಕದ ಮೈಕೇಲ್ ಫೆಲ್ಪ್ಸ್ ತಮ್ಮ ಅಚ್ಚರಿಯ ಫಾರಂ ಮುಂದುವರಿಸಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮೊದಲಿಗೆ 200 ಮೀ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಫೆಲ್ಪ್ಸ್ ಜಯಗಳಿಸಿ 20ನೇ ವೈಯಕ್ತಿಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
*ಫೆಲ್ಪ್ಸ್ 70 ನಿಮಿಷಗಳ ಬಳಿಕ 4x200 ಮೀ ಫ್ರೀಸ್ಟೈಲ್ ರಿಲೇಯಲ್ಲಿ 21ನೇ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಗೆಲುವಿನ ಓಟ ಮುಂದುವರಿಸಿ 7 ನಿಮಿಷ 0.66 ಸೆಕೆಂಡುಗಳಲ್ಲಿ ಗುರಿಮುಟ್ಟಿದರು.
* ರಿಯೊದಲ್ಲಿ ನಡೆದ ಒಲಿಂಪಿಕ್ 100 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ 18 ವರ್ಷ ವಯಸ್ಸಿನ ಕಿರಿಯ ಈಜುಪಟು ಕೈಲ್ ಚಾಲ್ಮರ್ ಚಿನ್ನವನ್ನು ಗೆದ್ದು 48 ವರ್ಷಗಳ ಪದಕದ ಬರವನ್ನು ನೀಗಿಸಿದರು.
* ಕಜಕಸ್ತಾನದ ನಿಜತ್ ರಹಿಮೋವ್ ಅವರು ಕ್ಲೀನ್ ಮತ್ತು ಜರ್ಕ್‌ನ 77 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವದಾಖಲೆಯಾದ 214 ಕೆಜಿ ತೂಕವನ್ನು ಗುರುವಾರ ಎತ್ತಿ ಚಿನ್ನದ ಪದಕ ಗಳಿಸಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿ ಹರ್ಷಿಸಿದರು.
* ಸ್ವತಂತ್ರ ಅಥ್ಲೀಟ್ ಆಗಿ ಸ್ಪರ್ಧಿಸಿದ್ದ ಕುವೈಟ್‌ನ ಫೆಹೈದ್ ಅಲ್ ದೀಹಾನಿ ಪುರುಷರ ಡಬಲ್ ಟ್ರಾಪ್ ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇಟಲಿಯ ಮಾರ್ಕೊ ಇನ್ನೊಸೆಂಟಿ ಬೆಳ್ಳಿಪದಕ ಮತ್ತು ಬ್ರಿಟಿಷ್ ಶೂಟರ್ ಸ್ಟೀವನ್ ಸ್ಕಾಟ್ ಕಂಚಿನ ಪದಕ ಗೆದ್ದಿದ್ದಾರೆ.
* ಭಾರತದ ಬೊಂಬಾಲ್ಯಾ ದೇವಿ ಮಹಿಳಾ ಬಿಲ್ಲುಗಾರಿಕೆ ಸ್ಪರ್ಧೆಗೆ ತೆರೆಬಿದ್ದಿದೆ. ಮೆಕ್ಸಿಕೊದ ಅಲಜೇಂದ್ರ ವ್ಯಾಲೆನ್ಸಿಯಾ ಮಹಿಳಾ ವೈಯಕ್ತಿಕ 1/8 ಎಲಿಮಿನೇಶನ್ ಸುತ್ತಿನಲ್ಲಿ 6-2ರಿಂದ ಜಯಗಳಿಸಿದರು.
* ಸೈನಾ ನೆಹ್ವಾಲ್ ಅಭಿಯಾನದಲ್ಲಿ ಶುಭಾರಂಭ ಮಾಡಿ ಬ್ರೆಜಿಲ್ ಲೊಹಾಯಿನಿ ವಿಸೆಂಟ್ ಅವರನ್ನು 21-17, 21-17 ನೇರ ಸೆಟ್‌ಗಳಲ್ಲಿ ಮಣಿಸಿದರು.
* ಸಿಂಧು ತನ್ನ ಎದುರಾಳಿ ಹಂಗರಿಯ ಲಾರಾ ಸಾರೋಸಿಯನ್ನು 21-8, 21-9ರಿಂದ ಸುಲಭವಾಗಿ ಸೋಲಿಸಿದರು.
* ದಿಯೊದೊರೊ ಪಾರ್ಕ್‌ನಲ್ಲಿರುವ ಒಲಿಂಪಿಕ್ ಹಾಕಿ ಕೇಂದ್ರದಲ್ಲಿ ಭಾರತ 1980 ಮಾಸ್ಕೊ ಕ್ರೀಡಾಕೂಟದ ಬಳಿಕ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶಿಸಿದೆ. ನೆದರ್‌ಲೆಂಡ್ಸ್‌ಗೆ 1-2ರಿಂದ ಸೋತ ಬಳಿಕವೂ ಭಾರತಕ್ಕೆ ಕ್ವಾರ್ಟರ್ ಫೈನಲ್ ಅವಕಾಶ ಸಿಕ್ಕಿದೆ.
* ಮಹಿಳಾ ಹಾಕಿಯಲ್ಲಿ ಅಮೆರಿಕಕ್ಕೆ ಭಾರತ 0-3ರಿಂದ ಸೋತಿದ್ದು, ರಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ಸತತ ಸೋಲನ್ನು ಅನುಭವಿಸಿದೆ.
*ಮಾಜಿ ಬಾಕ್ಸರ್ ಶಿವ ತಾಪಾ ಮತ್ತು ಭಾರತದ ಇಬ್ಬರು ಬಿಲ್ಲುಗಾರ್ತಿಯರ ನಿರ್ಗಮನ ಭಾರತದ ಗೆಲುವಿನ ಮನೋಭಾವಕ್ಕೆ ಕಾರ್ಮೋಡ ಕವಿಯಿತು. ತಾಪಾ ಕ್ಯೂಬಾದ ರೊಬೆಲಿಸ ರಾಮಿರೆಡ್ ಅವರಿಗೆ 56 ಕೆಜಿ ವಿಭಾಗದಲ್ಲಿ 0-3ರಿಂದ ಸೋತರು.