ಭಾರತದ ಅಥ್ಲೀಟ್‌ಗಳು ನೀಲಿ ಸೂಟ್ ಮತ್ತು ಹಳದಿ ಸೀರೆಗಳಲ್ಲಿ ಮಂದಸ್ಮಿತರಾಗಿ ರಿಯೋ ಒಲಿಂಪಿಕ್ಸ್ ಪರೇಡ್‌ನಲ್ಲಿ ಭಾಗವಹಿಸಿದರು. ಈ ಬಾರಿ 118 ಅಥ್ಲೀಟ್‌ಗಳು ರಿಯೋ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಅಭಿನವ್ ಭಿಂದ್ರಾ ತ್ರಿವರ್ಣ ಧ್ವಜವನ್ನು ಹಿಡಿದು ತಂಡವನ್ನು ಮುನ್ನಡೆಸಿದರು. ಅಥ್ಲೀಟ್‌ಗಳ ಮುಖದಲ್ಲಿ ಗೆಲ್ಲುವ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು.
ತಂಡದಲ್ಲಿ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ ಜತೆಗೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ ಮತ್ತು ಪಿವಿ ಸಿಂಧು ಕೂಡ ಪರೇಡ್‌ನಲ್ಲಿ ಪಾಲ್ಗೊಂಡಿದ್ದರು. ಲಿಯಾಂಡರ್ ಪೇಸ್ 7ನೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದು ದಾಖಲೆಯಾಗಿದ್ದು, ಅವರು ಏಳನೇ ಅಥ್ಲೀಟ್ ಪರೇಡ್‌ನ ಚಿತ್ರಗಳನ್ನು , ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.