ರಿಯೊ ಒಲಿಂಪಿಕ್ಸ್: ಮೇರಿ ಕಾಮ್‌ಗೆ ವೈಲ್ಡ್ ಕಾರ್ಡ್ ಎಂಟ್ರಿಗೆ ಯತ್ನ

ಬುಧವಾರ, 1 ಜೂನ್ 2016 (19:14 IST)
ಇನ್ನೊಂದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸುವ ಭಾರತದ ಮಹಿಳಾ ಬಾಕ್ಸರ್ ಮೇರಿ ಕಾಮ್ ಕನಸಿಗೆ ತೆರೆಬಿದ್ದ ಬಳಿಕ, ಇತ್ತೀಚಿನ ಬೆಳವಣಿಗೆಯಲ್ಲಿ ಮುಂಬರುವ ರಿಯೊ ಕ್ರೀಡಾಕೂಟದಲ್ಲಿ ಹಿರಿಯ ಬಾಕ್ಸರ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಲು ತಾತ್ಕಾಲಿಕ ಸಮಿತಿ ಪ್ರಯತ್ನಿಸಿದೆ.
 
ಮೇರಿ ಕಾಮ್ 51 ಕೆಜಿ ವಿಭಾಗದಲ್ಲಿ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರಾಗಿದ್ದು, ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಜರ್ಮನಿಯ ಅಜೀಜ್ ನಿಮಾನಿಗೆ ಎರಡನೇ ಸುತ್ತಿನಲ್ಲಿ 2-0ಯಿಂದ ಸೋತಿದ್ದರು.
 
ಅನೇಕ ತ್ಯಾಗಗಳ ಬಳಿಕ ಅತ್ಯುತ್ತಮ ಪ್ರಯತ್ನ ಮಾಡಿದೆ. ಆದರೆ ಸೋಲು, ಗೆಲುವು ಆಟದ ಭಾಗ. ಈ ತೀರ್ಪು ನನಗೆ ನೋವುಂಟು ಮಾಡಿದೆ. ಆದರೆ ನಿಜವಾದ ಕ್ರೀಡಾಮನೋಭಾವದಿಂದ ತೀರ್ಪುಗಾರರ ನಿರ್ಧಾರಕ್ಕೆ ಗೌರವಿಸಬೇಕು ಎಂದು ಐದು ಬಾರಿಯ ವಿಶ್ವಚಾಂಪಿಯನ್ ಹೇಳಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ