ರಿಯೊ ಒಲಿಂಪಿಕ್ಸ್ ಕನಸು ಭಗ್ನ: ಮೇರಿ ಕಾಂಗೆ ವೈಲ್ಡ್ ಕಾರ್ಡ್ ಪ್ರವೇಶ ನಿರಾಕರಣೆ

ಗುರುವಾರ, 23 ಜೂನ್ 2016 (16:54 IST)
ಐದು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕಾಮ್ ಅವರಿಗೆ ಗುರುವಾರ ಮುಂದಿನ ರಿಯೊ ಒಲಿಂಪಿಕ್ಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಲು ಐಒಸಿ ನಿರಾಕರಿಸುವ ಮೂಲಕ ಮೇರಿ ಕಾಮ್ ಒಲಿಂಪಿಕ್ ಕನಸು ಭಗ್ನಗೊಂಡಿದೆ.

ಎಐಬಿಎ ಮತ್ತು ತಾತ್ಕಾಲಿಕ ಸಮಿತಿಯ ಅಧ್ಯಕ್ಷ ಕಿಶೆನ್ ನಾರ್ಸಿ ಗುರುವಾರ ಕ್ರೀಡಾಕೂಟಕ್ಕೆ ಮೇರಿ ಕಾಂಗೆ ವೈಲ್ಡ್ ಕಾರ್ಡ್ ಎಂಟ್ರಿ ನಿರಾಕರಿಸಿರುವ ಸುದ್ದಿಯನ್ನು ತಿಳಿಸಿದರು. 
 
ದೇಶದಲ್ಲಿ ಬಾಕ್ಸಿಂಗ್ ನಿರ್ವಹಿಸುತ್ತಿರುವ ಐಒಎ ಮತ್ತು ತಾತ್ಕಾಲಿಕ ಸಮಿತಿಯು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಲು ವಿಫಲರಾಗಿದ್ದ ಮೇರಿಕಾಂಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಬೇಕೆಂದು ಕೋರಿದ್ದರು.  2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಮೇರಿ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ  ಜರ್ಮನಿಯ ಅಜೀಜ್ ನಿಮಾನಿಗೆ ಎರಡನೇ ಸುತ್ತಿನಲ್ಲಿ ಸೋತಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ