ರಿಯೋ ಒಲಿಂಪಿಕ್ಸ್‌ನಲ್ಲಿ ಯೋಗೇಶ್ವರ್ ದತ್‌ಗೆ ಸೋಲು

ಭಾನುವಾರ, 21 ಆಗಸ್ಟ್ 2016 (17:34 IST)
ರಿಯೋ ಒಲಿಂಪಿಕ್‌ನ 65 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಅರ್ಹತಾ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದ್ದಾರೆ.
 
ಭಾರತದ ಕುಸ್ತಿಪಟು ಯೋಗೇಶ್ವರ್ ದತ್, ತಮ್ಮ ಎದುರಾಳಿ ಮಂಗೋಲಿಯಾದ ಕುಸ್ತಿಪಟು ಗಂಜೋರಿಗಿನ್ ಮಂದಖನರನ್ ವಿರುದ್ಧ 0-3 ಅಂತರದಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
 
ಯೋಗೇಶ್ವರ್ ದತ್ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಲಕ್ಷಾಂತರ ಕ್ರೀಡಾಭಿಮಾನಿಗಳಿಗೆ ಅವರ ಸೋಲು ನಿರಾಸೆ ತಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ