ರಿಯೊ ಡಿರಾಫೆಲ್ ನಡಾಲ್ ತಮ್ಮ ಎರಡನೇ ಒಲಿಂಪಿಕ್ ಚಿನ್ನದ ಪದಕವನ್ನು ಶುಕ್ರವಾರ ಗೆದ್ದಿದ್ದು, ರಿಯೊ ಸಿಂಗಲ್ಸ್ ಸೆಮಿಫೈನಲ್ಸ್‌ಗೆ ತಲುಪುವ ಮೂಲಕ ಮೂರನೇ ಚಿನ್ನದ ಪದಕಕ್ಕೆ ಸಮೀಪದಲ್ಲಿದ್ದಾರೆ. ಸ್ಪೇನ್ ಗ್ರೇಟ್ ನಡಾಲ್ ಮತ್ತು ಸುದೀರ್ಘಕಾಲದ ಸ್ನೇಹಿತ ಮಾರ್ಕ್ ಲೋಪೆಜ್ ರೊಮಾನಿಯಾದ ಫ್ಲೊರಿನ್ ಮರ್ಗಿಯಾ ಮತ್ತು ಹೋರಿಯಾ ಟೆಕಾವು ಅವರನ್ನು 6-2, 3-6, 4-6ರಿಂದ ಪುರುಷರ ಡಬಲ್ಸ್‌ನಲ್ಲಿ ಸೋಲಿಸಿದರು.
ಇದು ನನ್ನ ಅತ್ಯುತ್ತಮ ಸ್ನೇಹಿತನ ಜತೆ ಗೆಲ್ಲುವ ಅಚ್ಚರಿಯ ಅನುಭವ ಎಂದು ನಡಾಲ್ ಗೆಲುವಿನ ಬಳಿಕ ಹೇಳಿದರು. ಇದಕ್ಕೆ ಮುಂಚೆ 30 ವರ್ಷದ ನಡಾಲ್ ಬ್ರೆಜಿಲ್ ಥಾಮಸ್ ಬೆಲ್ಲುಸಿಯನ್ನು 2-6, 6-4 ಮತ್ತು 6-2ರಲ್ಲಿ ಸಿಂಗಲ್ಸ್ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಸೋಲಿಸಿದರು. ನಡಾಲ್ ಶನಿವಾರ ಅರ್ಜಂಟೈನಾದ ಜಾನ್ ಮಾರ್ಟಿನ್ ಡೆಲ್ ಪೊಟ್ರೊವನ್ನು ಫೈನಲ್ ಸ್ಥಾನಕ್ಕಾಗಿ ಎದುರಿಸಲಿದ್ದಾರೆ.