ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿವಿ ಸಿಂಧು, ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಮಹಿಳೆಯರು ಮತ್ತು ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಅಭಿಯಾನದಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ. ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಅವರ ಮಿಶ್ರ ಡಬಲ್ಸ್ ಜೋಡಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ರಿಯೊ ಡಿ ಜನೈರೊದಲ್ಲಿ ಗುರುವಾರ ಭಾರತದ ಒಲಿಂಪಿಕ್ ತಂಡದಲ್ಲಿ ಮೇಲಿನ ಇಷ್ಟು ಮಂದಿ ಮಾತ್ರ ಮುನ್ನಡೆ ಸಾಧಿಸಿದ್ದಾರೆ.
ಸಿಂಧು ತನ್ನ ಎದುರಾಳಿ ಹಂಗರಿಯ ಲಾರಾ ಸಾರೋಸಿಯನ್ನು 21-8, 21-9ರಿಂದ ಸುಲಭವಾಗಿ ಸೋಲಿಸಿದರು. ಹಿಂದಿನ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಅಭಿಯಾನದಲ್ಲಿ ಶುಭಾರಂಭ ಮಾಡಿ ಬ್ರೆಜಿಲ್ ಲೊಹಾಯಿನಿ ವಿಸೆಂಟ್ ಅವರನ್ನು 21-17, 21-17 ನೇರ ಸೆಟ್‌ಗಳಲ್ಲಿ ಮಣಿಸಿದರು.
ಶ್ರೀಕಾಂತ್ ಮೆಕ್ಸಿಕೊದ ಲಿನೋ ಮುನೋಜ್(21-11, 21-17)ರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದರು. ದಿಯೊದೊರೊ ಪಾರ್ಕ್‌ನಲ್ಲಿರುವ ಒಲಿಂಪಿಕ್ ಹಾಕಿ ಕೇಂದ್ರದಲ್ಲಿ ಭಾರತ 1980 ಮಾಸ್ಕೊ ಕ್ರೀಡಾಕೂಟದ ಬಳಿಕ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶಿಸಿದೆ. ನೆದರ್‌ಲೆಂಡ್ಸ್‌ಗೆ 1-2ರಿಂದ ಸೋತ ಬಳಿಕವೂ ಭಾರತಕ್ಕೆ ಕ್ವಾರ್ಟರ್ ಫೈನಲ್ ಅವಕಾಶ ಸಿಕ್ಕಿದೆ.
ಮಹಿಳಾ ಹಾಕಿಯಲ್ಲಿ ಅಮೆರಿಕಕ್ಕೆ ಭಾರತ 0-3ರಿಂದ ಸೋತಿದ್ದು, ರಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ಸತತ ಸೋಲನ್ನು ಅನುಭವಿಸಿದೆ. ಪೂಲ್ ಬಿಯಲ್ಲಿ ನಾಲ್ಕು ಪಂದ್ಯಗಳಿಂದ ಒಂದು ಪಾಯಿಂಟ್ ಪಡೆದು ತಳದ ಎರಡು ತಂಡಗಳ ಪೈಕಿ ಒಂದಾಗಿದ್ದು, ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸುವ ಅವಕಾಶ ಕ್ಷೀಣಿಸಿದೆ.