RCB vs CSK Match:ಶೆಫರ್ಡ್‌ ಅಬ್ಬರದ ಬ್ಯಾಟಿಂಗ್‌ಗೆ ನಲುಗಿದ ಚೆನ್ನೈ, ಆರ್‌ಸಿಬಿಯಿಂದ ಬಿಗ್ ಟಾರ್ಗೆಟ್‌

Sampriya

ಶನಿವಾರ, 3 ಮೇ 2025 (21:26 IST)
Photo Credit X
ಬೆಂಗಳೂರು: ಚೆನ್ನೈ ವಿರುದ್ಧ 14 ಎಸೆತಗಳಲ್ಲಿ 53 ರನ್‌ಗಳಿಸುವ ಮೂಲಕ ರೊಮಾರಿಯೋ ಶೆಫರ್ಡ್‌  ಎಲ್ಲರ ಗಮನಸೆಳೆದರು.

ತವರಿನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ್ ಮಾಡಿದ ಆರ್‌ಸಿಬಿ, ಚೆನ್ನೈ ಗೆಲುವಿಗೆ 214 ರನ್‌ಗಳ ಗೆಲುವಿನ ಬಿಗ್ ಟಾರ್ಗೆಟ್ ನೀಡಿದೆ.

ಟಾಸ್‌ ಗೆದ್ದ ಚೆನ್ನೈ ನಾಯಕ ಧೋನಿ, ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಆರ್‌ಸಿಬಿಯನ್ನು ಬ್ಯಾಟಿಂಗ್ ಆಹ್ವಾನಿಸಿತು.

ಆರಂಭಿಕ ಆಟಗಾರ ಸಾಲ್ಟ್ ಇಲ್ಲದಿದ್ರೂ  ಬೆಥೆಲ್ ಜತೆ ಉತ್ತಮ ಆರಂಭ ಶುರುಮಾಡಿದ ಕೊಹ್ಲಿ (62), ಬೆಥೆಲ್(55), ಪಡಿಕ್ಕಲ್ (17), ಪಟಿದಾರ್ (11), ಜಿತೇಶ್‌ (7), ಡೇವಿಡ್ (2) ಹಗಾಗೂ ಶೆಫೆರ್ಡ್‌ (53) ರನ್‌ಗಳೊಂದಿಗೆ ಆರ್‌ಸಿಬಿ 213ರನ್ ಗಳಿಸಿತು. 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡ ಆರ್‌ಸಿಬಿ, ಚೆನ್ನೈಗೆ ಬಿಗ್ ಟಾರ್ಗೆಟ    ನೀಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ