ಒಲಿಂಪಿಕ್ ಟೆನ್ನಿಸ್ ಪದಕದ ಭರವಸೆಗೆ ಕೇವಲ ಒಂದು ಗೆಲುವು ಬಾಕಿವುಳಿದಿರುವಂತೆ, ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಅವರ ಮಿಶ್ರ ಡಬಲ್ಸ್ ಜೋಡಿ ಸೆಮಿಫೈನಲ್ಸ್‌ನಲ್ಲಿ ಆಡುವಾಗ ಭಾವನೆಗಳನ್ನು ಬದಿಗಿಟ್ಟು ಹೊಸದಾಗಿ ಆರಂಭಿಸಬೇಕಾಗಿದೆ ಎಂದಿದ್ದಾರೆ.
ಪ್ರತಿಯೊಂದು ಸುತ್ತು ಕಠಿಣವಾಗಿರುವುದರಿಂದ ನಾವು ಸುಧಾರಿಸಬಹುದೆಂದು ನಾವು ಈಗಲೂ ಭಾವಿಸಿದ್ದೇವೆ ಎಂದು ಹೇಳಿದರು. ಪ್ರತಿಯೊಂದು ದಿನವೂ ಹೊಸ ದಿನವಾಗಿದ್ದು, ಆ್ಯಂಡಿಯನ್ನು ಸೋಲಿಸಿದ ಬಳಿಕ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದೆ. ಆದರೆ ಕೊನೆಯಲ್ಲಿ ನಾವು ಭಾವನೆಗಳನ್ನು ಬದಿಗಿಟ್ಟು ಶ್ರೇಷ್ಟ ಪ್ರದರ್ಶನ ನೀಡಬೇಕಾಗಿದೆ ಎಂದು ಸಾನಿಯಾ ಹೇಳಿದರು.
ಭಾರತದ ಜೋಡಿ ಅಮೆರಿಕದ ಜೋಡಿಗಳಾದ ವೀನಸ್ ವಿಲಿಯಮ್ಸ್ ಮತ್ತು ರಾಮ್ ರಾಜೀವ್ ಅವರನ್ನು ಸೆಮಿಫೈನಲ್ಸ್‌ನಲ್ಲಿ ಎದುರಿಸಲಿದೆ. ಭಾರತದ ಜೋಡಿ ಸೆಮಿಫೈನಲ್ಸ್ ಗೆದ್ದರೆ ಸಾನಿಯಾ ಬೋಪಣ್ಣಗೆ ಬೆಳ್ಳಿಪದಕ ದಕ್ಕುವ ಭರವಸೆ ಇರುತ್ತದೆ. ಅದರಲ್ಲಿ ಸೋತರೆ ಅವರು ಕಂಚಿನ ಪದಕಕ್ಕಾಗಿ ಇನ್ನೊಂದು ಪಂದ್ಯವನ್ನು ಆಡಬೇಕು ಎಂದರು. ಬ್ರಿಟಿಷ್ ಜೋಡಿಯ ವಿರುದ್ಧ ತಾವು ಹೋಮ್ ವರ್ಕ್ ಮಾಡಿದ್ದಾಗಿಯೂ ಅದು ಕ್ಲಿಕ್ ಆಯಿತೆಂದೂ ಸಾನಿಯಾ ಹೇಳಿದರು.