ಲಾಸ್ ವೆಗಾಸ್‌ನಲ್ಲಿ 2015ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಯಾದವ್ ಅವರನ್ನು ನಿಷೇಧಿತ ಸ್ಟೆರಾಯ್ಡ್ ಸೇವನೆಯ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಐಒಎ ತಾತ್ಕಾಲಿಕ ಅಮಾನತುಗೊಳಿಸಿದೆ. ಯಾದವ್ ಅನಾಬಲಿಕ್ ಸ್ಟೆರಾಯ್ಡ್ ಮೆಥಾಂಡಿನೋನ್ ಸೇವಿಸಿದ್ದೆಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಯಾದವ್ ಬದಲಿಗೆ ರಾಣಾರನ್ನು ತಾವು ಕಳಿಸುವುದಾಗಿ ಐಒಎ ಸಂಯುಕ್ತ ವಿಶ್ವ ಕುಸ್ತಿ ಒಕ್ಕೂಟಕ್ಕೆ ತಿಳಿಸಿದೆ.
ರಿಯೋ ಕ್ರೀಡಾಕೂಟಕ್ಕೆ ಮುನ್ನ ಯಾದವ್ ಸುದ್ದಿಯಲ್ಲಿದ್ದು, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಕೂಡ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಬಯಸಿದ್ದರು. ಈ ಕುರಿತು ಯಾದವ್ ವಿರುದ್ಧ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದರು ಮತ್ತು ಡೆಲ್ಲಿ ಹೈಕೋರ್ಟ್‌ನಲ್ಲಿ ಕೂಡ ಅಪೀಲು ಮಾಡಿದ್ದರು. ಆದರೆ ಭಾರತ ಕುಸ್ತಿ ಒಕ್ಕೂಟ ಯಾದವ್ ಅವರನ್ನು ರಿಯೊ ಡಿಜನೈರೊಗೆ ಕಳಿಸಲು ನಿರ್ಧರಿಸಿತ್ತು.