ಕಂಚಿನಿಂದ ವಂಚಿತರಾದ ಬಾಷಾ

ಶನಿವಾರ, 10 ಸೆಪ್ಟಂಬರ್ 2016 (08:31 IST)
ರಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಫರ್ಮಾನ್ ಬಾಷಾ ಸ್ವಲ್ಪದರಲ್ಲಿಯೇ ಕಂಚಿನ ಪದಕದಿಂದ ವಂಚಿತರಾಗಿದ್ದಾರೆ. ಬಾಷಾ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಪಟುವಾಗಿದ್ದರು. 

 
49 ಕೆಜಿ ವಿಭಾಗದ ಪವರ್ ಲಿಫ್ಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಬಾಷಾ 140 ಕೆಜಿ ಭಾರ ಎತ್ತಿದರು. ಆದರೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.
 
ತಮ್ಮ ಪ್ರಥಮ ಪ್ರಯತ್ನದಲ್ಲಿಯೇ 140ಕೆಜಿ ಎತ್ತಿದ್ದ ಬಾಷಾ ದ್ವಿತೀಯ ಮತ್ತು ತೃತೀಯ ಯತ್ನಗಳಲ್ಲಿ 150 ಮತ್ತು 155 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. 
 
181 ಕೆಜಿ ಎತ್ತಲು ಶಕ್ತವಾದ ಲೀ ಮಾನ್ ಚಿನ್ನಕ್ಕೆ ಮುತ್ತಿಕ್ಕಿದರೆ, ಜೋರ್ಡಾನ್‌ನ ಓಮರ್ 177ಕೆಜಿ ಭಾರ ಎತ್ತಿ ರಜತವನ್ನು ತಮ್ಮದಾಗಿಸಿಕೊಂಡರು. ಹಂಗೇರಿಯ ತುನಕೆಲ್ ನಾನ್ಡೋರ್ ಕಂಚನ್ನು ಗೆದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ