ನವದೆಹಲಿ: ಭಾರತದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರು ರಿಯೊ ಒಲಿಂಪಿಕ್ಸ್‌ಗೆ ತೆರಳಲಿರುವ ಕುಸ್ತಿ ಪಟುಗಳನ್ನು ನಗರದ ಹೊಟೆಲ್‌ನಲ್ಲಿ ಭೇಟಿ ಮಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಿದರು. ಯೋಗೇಶ್ವರ್ ದತ್ (ಪುರುಷರ 65 ಕೆಜಿ) ಮತ್ತು ತೋಮಾಲ್( 57 ಕೆಜಿ) ಹೊರತುಪಡಿಸಿ ಒಲಿಂಪಿಕ್ ಕೋಟಾ ಗಳಿಸಿದ ಎಲ್ಲಾ ಕುಸ್ತಿಪಟುಗಳಾದ ನರಸಿಂಗ ಯಾದವ್, ವಿನೇಶ್ ಪೋಗಟ್, ಬಬಿತಾ ಕುಮಾರಿ, ಸಾಕ್ಷಿ ಮಲಿಕ್, ರವೀಂದರ್ ಖಾತ್ರಿ, ಹರದೀಪ್ ಲೆಜೆಂಡ್ ಬ್ಯಾಟ್ಸ್‌ಮನ್ ಸಚಿನ್ ಅವರನ್ನು ಭೇಟಿ ಮಾಡಿದರು.