ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ನಂಬರ್ ಒನ್ ಪಟ್ಟ ಅಲಂಕರಿಸಿದ ಸೈನಾ ನೆಹ್ವಾಲ್

ಶನಿವಾರ, 28 ಮಾರ್ಚ್ 2015 (18:46 IST)
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಇಂಡಿಯನ್ ಓಪನ್ ಸೂಪರ್ ಸೀರೀಸ್ ಪಂದ್ಯಾವಳಿಯಲ್ಲಿ  ವಿಶ್ವದ ನಂಬರ್ ಒನ್ ಪಟ್ಟವನ್ನು ಅಲಂಕರಿಸಿದ್ದಾರೆ. ಸೈನಾ ನೆಹ್ವಾಲ್ ಅವರಿಗೆ ವಿಶ್ವ ಶ್ರೇಯಾಂಕದಲ್ಲಿ ಪೈಪೋಟಿ ನೀಡುತ್ತಿದ್ದ ಸ್ಪೇನ್‌ನ ಕರೋಲಿನಾ ಮರಿನ ಅವರು ಇಂಡಿಯನ್ ಓಪನ್ ಸೂಪರ್ ಸೀರೀಸ್ ಸೆಮಿಫೈನಲ್‌ನಲ್ಲಿ ಸೋತಿದ್ದರಿಂದ ಸೈನಾ ನೆಹ್ವಾಲ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದರು.

 
ಎರಡನೇ ಸೀಡ್ ಆಗಿದ್ದ ಮರಿನ ಮೂರನೇ ಸೀಡ್ ಥಾಯಿ ರಚನೋಕ್‌ಗೆ  21-19 21-23 22-30 ಸೆಟ್‌ಗಳಿಂದ ಸೋತಿದ್ದರಿಂದ ಸೈನಾಗೆ ನಂಬರ್ ಒನ್ ಪಟ್ಟದ ಭಾಗ್ಯ ಒಲಿದುಬಂದಿದೆ. ಪ್ರಕಾಶ್ ಪಡುಕೋಣೆ ನಂ. ಒನ್ ಪುರುಷರ ಬ್ಯಾಡ್ಮಿಂಟನ್ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದು,  ಸೈನಾ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
 
 ಸೈನಾ ಅವರು ಜಪಾನ್ ಯಯಿ ಹಶಿಮೋಟೊ ವಿರುದ್ಧ ಎರಡನೇ ಸೆಮಿಫೈನಲ್ ಆಡಲಿದ್ದು, ಅದರಲ್ಲಿ ಸೋತರೂ ಕೂಡ ನಂ.ಒನ್ ಪಟ್ಟ ಹಾಗೆಯೇ ಉಳಿದಿರುತ್ತದೆ.  ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಸೈನಾ ತಮ್ಮ ವೃತ್ತಿಜೀವನದಲ್ಲಿ 14 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದು, ಇತ್ತೀಚೆಗೆ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಫಿಪ್‌ನ ಫೈನಲ್ಸ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದರು. ಸೆಮಿಫೈನಲ್ ಪ್ರವೇಶಿಸಿದ್ದರಿಂದ ಅವರಿಗೆ 6420 ಪಾಯಿಂಟ್‌ಗಳೊಂದಿಗೆ  ಸೈನಾ ಸೆಮಿಫೈನಲ್‌ನಲ್ಲಿ ಸೋತರೂ 75761 ಪಾಯಿಂಟ್‌ ದಕ್ಕಲಿದೆ. ಕರೋಲಿನಾ ಮರಿನ ಅವರ ಒಟ್ಟು ಪಾಯಿಂಟ್‌ಗಳು 73, 618 ಮಾತ್ರ. 

ವೆಬ್ದುನಿಯಾವನ್ನು ಓದಿ