ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾಗೆ ಸೋಲು

ಶುಕ್ರವಾರ, 29 ಆಗಸ್ಟ್ 2014 (16:20 IST)
ವಿಶ್ವ ಬ್ಯಾಡ್ಮಿಂಟನ್‌‌‌ ಚಾಂಪಿಯನ್‌ಶಿಪ್‌‌ನ ಕ್ವಾರ್ಟರ್ ಫೈನಲ್‌‌ನಲ್ಲಿ ಭಾರತೀಯ ಸ್ಟಾರ್ ಮತ್ತು ಒಲಂಪಿಕ್‌‌ ನಲ್ಲಿ ಕಂಚಿನ ಪದಕ ಪಡೆದ ಸೈನಾ ನೆಹ್ವಾಲ್ ತಮ್ಮ ಎದುರಾಳಿಯಾದ ಚೀನಾದ ಜುಯಿರುಉಯಿ ಲಿ ರಿಂದ ಸೋಲನ್ನು ಅನುಭವಿಸಿದ್ದಾರೆ. 
 
ಸೈನಾರ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ  ನಂಬರ್ ಒನ್‌ ಆಟಗಾರ್ತಿ ಟಾಪ್‌ ಸೀಡ್‌ ಮತ್ತು ಒಲಂಪಿಕ್‌ ಚಾಂಪಿಯನ್ ಚೀನಾದ ಜುಯಿಜುಯಿ ಲೀ ವಿರುದ್ದ ಸೆಣಸಾಟವಿತ್ತು. 
 
ಚೀನಾದ ಜುಯಿಜುಯಿ ಲೀ ತಮ್ಮದೇ ದೇಶದ ಮತ್ತು 12ನೇ ಸೀಡ್‌‌ ಲೀ ಹಾನ್‌ರನ್ನು 27ನಿಮಿಷದಲ್ಲಿ 21-9, 21-17 ಅಂತರದಿಂದ ಸೋಲಿಸಿದ್ದರು. 
 
ಇದಕ್ಕೂ ಮೊದಲು ಗುರುವಾರ ಸೈನಾ ನೆಹ್ವಾಲ್‌ 13ನೇ ಶ್ರೇಯಾಂಕಿತೆ ಜಪಾನ್‌ನ ಸಯಾಕಾ ತಾಕಾಹಶಿರನ್ನು ಸೋಲಿಸಿ  ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌‌‌ನ ಕ್ವಾರ್ಟರ್ ಫೈನಲ್‌‌‌ನಲ್ಲಿ ಪ್ರವೇಶ ಪಡೆದಿದ್ದರು. 
 
ಸೈನಾ ತಾಕಹಾಶಿರನ್ನು ಒಂದು ಗಂಟೆ ಐದು ನಿಮಿಷದಲ್ಲಿ  14-21 21-18  21-12 ಅಂತರದಿಂದ ಸೋಲಿಸಿದ್ದರು.

ವೆಬ್ದುನಿಯಾವನ್ನು ಓದಿ