ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್‌ಗೆ ಮತ್ತೆ ಅಗ್ರಸ್ಥಾನದ ಪಟ್ಟ

ಗುರುವಾರ, 16 ಏಪ್ರಿಲ್ 2015 (16:20 IST)
ದೇಶದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತೆ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಚೀನಾದ ಆಟಗಾರ್ತಿ ಲಿ ಝುರೈ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಇಂಡಿಯಾ ಓಪನ್ ಗ್ರ್ಯಾಂಡ್‌ಪ್ರಿಕ್ಸ್ ಪ್ರಶಸ್ತಿ ಪಡೆದು ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದ ಸೈನಾ, ಮಲೇಷ್ಯಾ ಓಪನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದರಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದರು.

ಮತ್ತೊಬ್ಬ ಖ್ಯಾತ ಆಟಗಾರ್ತಿ ಪಿ.ವಿ.ಸಿಂಧು ಮೂರು ಸ್ಥಾನಗಳ ಕುಸಿತ ಕಂಡಿದ್ದರಿಂದ ಟಾಪ್-10ರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಪುರುಷರ ಶ್ರೇಯಾಂಕದಲ್ಲಿ ಕೆ.ಶ್ರೀಕಾಂತ್ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಪಿ. ಕಶ್ಯಪ್ 14ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸಿಂಗಾಪುರ್ ಓಪನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದ ಎಚ್.ಎಸ್.ಪ್ರಣಾಯ್ 15ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ