ಸಾನಿಯಾ ಮಿರ್ಜಾ ಸಿನಿಮಾ ಮಾಡ್ತಾರಂತೆ!

ಬುಧವಾರ, 1 ಮಾರ್ಚ್ 2017 (12:49 IST)
ಮುಂಬೈ: ಭಾರತೀಯ ಟೆನಿಸ್ ಲೋಕದ ಮಿನುಗು ತಾರೆ ಸಾನಿಯಾ ಮಿರ್ಜಾ ಜೀವನ ಯಾವ ಸಿನಿಮಾಗೂ ಕಡಿಮೆಯಿಲ್ಲ. ಅದಕ್ಕಾಗಿ ಬಾಲಿವುಡ್ ನಿರ್ದೇಶಕರನ್ನು ಭೇಟಿಯಾಗುತ್ತಿದ್ದಾರಂತೆ ಸಾನಿಯಾ.


ಹೀಗೊಂದು ಸುದ್ದಿ ಬಾಲಿವುಡ್ ವಲಯದಲ್ಲಿ ಓಡಾಡುತ್ತಿದೆ. ಹಲವು ನಿರ್ದೇಶಕರನ್ನು ಭೇಟಿಯಾಗಿ ತನ್ನ ಜೀವನದ ಕತೆಯನ್ನು ಸಿನಿಮಾ ಮಾಡುವ ಬಗ್ಗೆ ಸಾನಿಯಾ ಚರ್ಚಿಸುತ್ತಿದ್ದಾರಂತೆ. ಆದರೆ ಈ ಬಗ್ಗೆ ಈಗಲೇ ಎಲ್ಲವನ್ನೂ ಹೇಳಲು ಸಮಯವಾಗಿಲ್ಲ ಎನ್ನುತ್ತಿವೆ ಸಾನಿಯಾ ಬಲ್ಲ ಮೂಲಗಳು.

ಕ್ರಿಕೆಟ್ ನಂತೇ ಭಾರತೀಯರು ಟೆನಿಸ್ ನ್ನೂ ನೋಡುವ ಹಾಗೆ ಮಾಡಿದವರು ಸಾನಿಯಾ. ಈಗಾಗಲೇ ಕೆಲವು ಕ್ರಿಕೆಟಿಗರ ಜೀವನ ಚರಿತ್ರೆ ಸಿನಿಮಾವಾಗಿದೆ. ಇದೀಗ ಸಾನಿಯಾ ಸರದಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ