ಸಾನಿಯಾ ಮಿರ್ಜಾ ಬ್ಯಾಡ್ಮಿಂಟನ್ ಡಬಲ್ಸ್ ಗೆದ್ದರಂತೆ!

ಸೋಮವಾರ, 9 ಜನವರಿ 2017 (11:46 IST)
ಹೈದರಾಬಾದ್: ಸಾನಿಯಾ ಮಿರ್ಜಾ ಟೆನಿಸ್ ತಾರೆಯಾ? ಬ್ಯಾಡ್ಮಿಂಟನ್ ತಾರೆಯಾ ಎಂಬ ಅನುಮಾನ ಈಗ ಅಭಿಮಾನಿಗಳಲ್ಲಿ ಮೂಡಿದೆ. ಇಂತಹದ್ದೊಂದು ಅನುಮಾನ ಹುಟ್ಟು ಹಾಕಿದ್ದು ಡಿಡಿ ಸುದ್ದಿ ವಾಹಿನಿಯ ಸುದ್ದಿ.


ಅಸಲಿಗೆ ಇದು ಸುದ್ದಿ ವಾಹಿನಿ ಮಾಡಿದ್ದ ಎಡವಟ್ಟು. ಬ್ರಿಸ್ಬೇನ್ ನಲ್ಲಿ ಸಾನಿಯಾ ಟೆನಿಸ್ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು. ಆದರೆ ಇದನ್ನು ಎಡವಟ್ಟು ಮಾಡಿಕೊಂಡು ಸುದ್ದಿ ವಾಹಿನಿ ಬ್ಯಾಡ್ಮಿಂಟನ್ ಎಂದು ಬರೆದುಕೊಂಡಿತ್ತು. ಅದೂ ಸಾಲದ್ದಕ್ಕೆ ವಾರ್ತಾ ವಾಚಕಿ ಕೂಡಾ ಇದೇ ರೀತಿ ಓದಿದರು.

ಕೊನೆಗೆ ತನ್ನ ತಪ್ಪಿನ ಅರಿವಾದಾಗ ಡಿಡಿ ಸುದ್ದಿ ವಾಹಿನಿ ನಿರ್ದೇಶಕ ಸುದರ್ಶನ್ ಪಂತೋಡೆ ಕ್ಷಮೆ ಯಾಚಿಸಿದ್ದಲ್ಲದೆ, ಈ ಪ್ರಮಾದದ ಬಗ್ಗೆ ಗೊತ್ತಿರಲಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಏನೇ ಆದರೂ, ಸುದ್ದಿ ವಾಚಕಿ ಕೂಡಾ ಇಂತಹಾ ಪ್ರಮಾದ ಮಾಡಿದ್ದನ್ನು ಸಾನಿಯಾ ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿರುವುದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ