ರೋಹನ್ ಬೋಪಣ್ಣಗೇ ಚಮಕ್ ಕೊಟ್ಟು ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಗೇರಿದ ಸಾನಿಯಾ ಮಿರ್ಜಾ

ಬುಧವಾರ, 25 ಜನವರಿ 2017 (11:15 IST)
ಸಿಡ್ನಿ: ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದವರೇ ಭಾರತದವರನ್ನು ಸೋಲಿಸಿದ್ದಾರೆ! ಅಂದರೆ ಭಾರತದ ಸಾನಿಯಾ ಮಿರ್ಜಾ ತಮ್ಮದೇ ದೇಶದ ರೋಹನ್ ಬೋಪಣ್ಣ ಜೋಡಿಯನ್ನು ಸೋಲಿಸಿ ಮಿಕ್ಸೆಡ್ ಡಬಲ್ಸ್ ಸೆಮಿಫೈನಲ್ ಗೇರಿದ್ದಾರೆ.

 
ಸಾನಿಯಾ ಮಿರ್ಜಾ ಮತ್ತು ಇವಾನ್ ಡೊಡಿಕ್ ಜೋಡಿ ರೋಹನ್ ಬೋಪಣ್ಣ ಮತ್ತು ಗ್ಯಾಬ್ರಿಯಲ್ ದಬ್ರೋವ್ ಸ್ಕಿ ಜೋಡಿಯನ್ನು 6-4,3-6, 12-10 ಅಂತರದಿಂದ ಸೋಲಿಸಿದರು. ವಿಶೇಷವೆಂದರೆ ಸೆಮಿಫೈನಲ್ ನಲ್ಲಿ ಮತ್ತೆ ಸಾನಿಯಾ ತಮ್ಮ ಭಾರತೀಯ ಸಹ ಆಟಗಾರ ಲಿಯಾಂಡರ್ ಪೇಸ್ ಜೋಡಿಯನ್ನು ಎದುರಿಸುವ ಸಾಧ್ಯತೆಯಿದೆ.

ರೋಹನ್ ಬೋಪಣ್ಣ ಈ ಮೊದಲು ಇದೇ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪಂದ್ಯದಲ್ಲೂ ಆಡಿ ಸೋಲನುಭವಿಸಿದ್ದರು. ಈಗ ಮಿಶ್ರ ಡಬಲ್ಸ್ ನಲ್ಲೂ ಸೋತು ಈ ಋತುವಿನ ಮೊದಲ ಗ್ರಾಂಡ್ ಸ್ಲಾಂ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ