ನಮ್ಮ ನಡುವೆ ಏನಿಲ್ಲ! ಒಟ್ಟಿಗೆ ಕಾಣಿಸಿಕೊಂಡ ಸಾನಿಯಾ-ಶೊಯೇಬ್ ದಂಪತಿ

ಬುಧವಾರ, 23 ನವೆಂಬರ್ 2022 (08:30 IST)
Photo Courtesy: Twitter
ದುಬೈ: ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ದಂಪತಿ ನಡುವೆ ವಿರಸ ಮೂಡಿವೆ ಎಂಬ ಸುದ್ದಿಗಳಿಗೆ ಈಗ ಫುಲ್ ಸ್ಟಾಪ್ ಬಿದ್ದಿದೆ.

ಸಾನಿಯಾ ದಂಪತಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಮೊದಲು ಭಾರೀ ಸುದ್ದಿಯಾಗಿತ್ತು. ಆದರೆ ಇಬ್ಬರೂ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿರಲಿಲ್ಲ.

ಆದರೆ ಸಾನಿಯಾ ಹುಟ್ಟುಹಬ್ಬದ ಸಂದರ್ಭದಲ್ಲಿ ಇಬ್ಬರೂ ಜೊತೆಯಾಗಿ ಟಾಕ್ ಶೋ ಒಂದನ್ನು ನಡೆಸಿಕೊಡುವ ಬಗ್ಗೆ ಘೋಷಣೆ ಮಾಡಿದ್ದರು. ಆಗಲೇ ಇದೆಲ್ಲಾ ರೂಮರ್ ಎಂದು ಗೊತ್ತಾಗಿತ್ತು. ಇದೀಗ ಸಾನಿಯಾ ಮತ್ತು ಶೊಯೇಬ್ ತಮ್ಮ ಟಾಕ್ ಶೋ ಶೂಟಿಂಗ್ ನಿಮಿತ್ತ ಒಟ್ಟಿಗೇ ಖುಷಿಯಿಂದ ಜೊತೆಗಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇಬ್ಬರ ನಡುವಿನ ವಿರಸದ ಸುದ್ದಿಗಳೆಲ್ಲಾ ಸುಳ್ಳು ಎನ್ನುವುದು ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ