ಟೆನಿಸ್ ಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ
ಈ ಸೀಸನ್ ನನ್ನ ಪಾಲಿಗೆ ಕೊನೆಯ ಸೀಸನ್ ಆಗಲಿದೆ ಎಂದು ಸಾನಿಯಾ ಹೇಳಿದ್ದಾರೆ. ಸದ್ಯಕ್ಕೆ ವಾರದಿಂದ ವಾರದ ಗುರಿ ಹಾಕಿಕೊಂಡಿದ್ದೇನೆ. ಆದರೆ ಈ ಸೀಸನ್ ನ್ನೂ ಪೂರ್ತಿಯಾಗಿ ಆಡಲು ಸಾಧ‍್ಯವಾಗುತ್ತದೆ ಎಂದು ಅನಿಸುತ್ತಿಲ್ಲ ಎಂದಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಮಗ, ಗಾಯದ ಸಮಸ್ಯೆಯಿಂದಾಗಿ ಸಾನಿಯಾ ಆಡುವುದೇ ಅಪರೂಪವಾಗಿದೆ. ಅದರಲ್ಲೂ ಅವರ ಆಟದಲ್ಲೂ ಹಿಂದಿನ ಹೊಳಪಿಲ್ಲ. ಹೀಗಾಗಿ ಟೆನಿಸ್ ಆಟಕ್ಕೆ ಮುಕ್ತಾಯ ಹಾಡಲು ನಿರ್ಧರಿಸಿದ್ದಾರೆ. 35 ರ ಹರೆಯದ ಸಾನಿಯಾ ಸಿಂಗಲ್ಸ್ ವಿಭಾಗದಲ್ಲಿ ಅಗ್ರ 30 ರೊಳಗೆ ಸ್ಥಾನ ಪಡೆದ ಮೊದಲ ಭಾರತೀಯ ಆಟಗಾರ್ತಿ. ಅಲ್ಲದೆ ಡಬಲ್ಸ್ ವಿಭಾಗದಲ್ಲಿ 6 ಗ್ರ್ಯಾಂಡ್ ಸ್ಲಾಂ ಗೆದ್ದ ದಾಖಲೆ ಮಾಡಿದ್ದರು. ಭಾರತ ಮಹಿಳಾ ಟೆನಿಸ್ ಗೆ ಹೊಸ ರಂಗು ತಂದ ಆಟಗಾರ್ತಿ ಸಾನಿಯಾ. ಇದೀಗ ಅವರ ನಿವೃತ್ತಿ ಎಷ್ಟೋ ಅಭಿಮಾನಿಗಳಿಗೆ ನಿರಾಸೆ ತರಲಿದೆ.