ಬೆಡ್ ರೂಂನಲ್ಲಿ ಪತಿ ಶೊಯೇಬ್ ಮಲಿಕ್ ಜತೆಗಿರುವ ಖಾಸಗಿ ಫೋಟೋವನ್ನು ಹರಿಯಬಿಟ್ಟ ಸಾನಿಯಾ ಮಿರ್ಜಾ!

ಗುರುವಾರ, 3 ಜನವರಿ 2019 (09:12 IST)
ದುಬೈ: ಹೊಸ ವರ್ಷಾಚರಣೆ ಜತೆಗೆ ಪತಿ ಶೊಯೇಬ್ ಮಲಿಕ್ ಜತೆ ಕಾಲ ಕಳೆಯಲು ಮಗುವಿನ ಸಮೇತ ದುಬೈಗೆ ತೆರಳಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈ ವರ್ಷ ತಮ್ಮ ಬಯಕೆ ಏನೆಂದು ಬಹಿರಂಗಪಡಿಸಿದ್ದಾರೆ.


ಕಳೆದ ವರ್ಷ ನನಗೆ ವೈಯಕ್ತಿಕವಾಗಿ ಇಝಾನ್ ರೂಪದಲ್ಲಿ ದೊಡ್ಡ ಗಿಫ್ಟ್ ಸಿಕ್ಕಿತು. ಈ ವರ್ಷ ನಾನು ಮಗುವಿನಂತೆ ಅಲ್ಲ, ಶೊಯೇಬ್ ರಂತೆ ಮಲಗಿ ನಿದ್ರಿಸಬೇಕು ಎಂದಿದ್ದೇನೆ ಎಂದು ಸಾನಿಯಾ ತಮ್ಮ ಬೆಡ್ ರೂಂನಲ್ಲಿ ಮಗುವಿನ ಜತೆಗೆ ಶೊಯೇಬ್ ಮಗುವಿನಂತೆ ನಿದ್ರಿಸುವ ಫೋಟೋ ಹಾಕಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಪಾಕ್ ಕ್ರಿಕೆಟಿಗರೂ ಆಗಿರುವ ಶೊಯೇಬ್ ಮತ್ತು ಸಾನಿಯಾ ದುಬೈನಲ್ಲಿ ಮನೆ ಮಾಡಿಕೊಂಡಿದ್ದಾರೆ. ಬಿಡುವಿನ ವೇಳೆ ಇಬ್ಬರೂ ಸ್ಟಾರ್ ಆಟಗಾರರು ಇಲ್ಲಿ ಕಾಲ ಕಳೆಯುತ್ತಾರೆ. ಇದೀಗ ಮಗುವಾದ ಮೇಲೆ ಇದೇ ಮೊದಲ ಬಾರಿಗೆ ದುಬೈನಲ್ಲಿ ಎಂಜಾಯ್ ಮಾಡುತ್ತಿದ್ದು, ಈ ಖಾಸಗಿ ಫೋಟೋವನ್ನು ಸಾನಿಯಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ